- Advertisement -
- Advertisement -
ಮುಂಬೈ: ಏಷ್ಯಾದ ಅತಿ ದೊಡ್ಡ ಸ್ಲಮ್ ಆಗಿರುವ ಮುಂಬೈನ ಧಾರಾವಿಯಲ್ಲಿ ಕೊರೋನಾ ವೈರಸ್ ಗೆ ಮಂಗಳವಾರ ಮತ್ತೆ ಇಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ಇಂದು ಧಾರಾವಿಯಲ್ಲಿ ಹೊಸದಾಗಿ 6 ಸೋಂಕಿತರು ಪತ್ತೆಯಾಗಿದ್ದು, ಮುಸ್ಲಿಂ ನಗರ, ಕಲ್ಯಾಣವಾಡಿ, ಜನತಾ ಸೊಸೈಟಿ ಹಾಗೂ ರಾಜೀವ ನಗರದ ಪ್ರದೇಶದ ಆರು ಮಂದಿಗೆ ಪಾಸಿಟಿವ್ ಬಂದಿದೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಮಹಾಮಾರಿ ವೈರಸ್‌ಗೆ ಇಂದು ಇಬ್ಬರು ಸಾವನ್ನಪ್ಪಿದ್ದು, ಧಾರಾವಿಯಲ್ಲಿ ಇದುವರೆಗೆ ಏಳು ಜನರು ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2,455 ಇದ್ದು, ಮುಂಬೈ ಮಹಾ ನಗರದಲ್ಲೇ 1540 ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ
- Advertisement -