Thursday, June 4, 2026
Homeತಾಜಾ ಸುದ್ದಿಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಶಾಸಕ ರೇಣುಕಾಚಾರ್ಯ: ದೂರು ದಾಖಲು

ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಶಾಸಕ ರೇಣುಕಾಚಾರ್ಯ: ದೂರು ದಾಖಲು

- Advertisement -
- Advertisement -

ದಾವಣಗೆರೆ:  ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಹಾಗಾಗಿದೆ ಶಾಸಕ ರೇಣುಕಾಚಾರ್ಯ ಕಥೆ.

ಲೈಸೆನ್ಸ್ ಇಲ್ಲದೆ ಬಸ್ ಓಡಿಸಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ಬೈರನಹಳ್ಳಿ ಗ್ರಾಮದಲ್ಲಿ
ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರ ಬಳಿ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ಶಾಸಕ ಎಂ.ಪಿ. ರೇಣುಕಾಚಾರ್ಯ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರಲ್ಲದೇ ಕೆ ಎಸ್ ಆರ್ ಟಿ ಸಿ ಬಸ್ ತಾವೇ ಚಲಾಯಿಸಿ ಗಮನ ಸೆಳೆದಿದ್ದರು.

ಗ್ರಾಮಕ್ಕೆ ಬಸ್ ಓಡಿಸಿಕೊಂಡು ಬಂದ ಶಾಸಕರನ್ನು ಕಂಡು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಲೈಸನ್ಸ್ ಇಲ್ಲದೇ ಶಾಸಕ ರೇಣುಕಾಚಾರ್ಯ ಬಸ್ ಓಡಿಸಿದ್ದಕ್ಕಾಗಿ ಇದೀಗ ಶಾಸಕರ ವಿರುದ್ಧ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!