- Advertisement -
![]()
- Advertisement -
ಕಡಬ: ಇಲ್ಲಿನ ಕುಟ್ರುಪಾಡಿ ಗ್ರಾಮದ ಕೇಪು ಅಮೈ ಎಂಬಲ್ಲಿರುವ ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ ಬಳಕೆಯಾಗುತ್ತಿದ್ದು ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯರು ಪೋಲಿಸರಿಗೆ ದೂರು ನೀಡಿದ್ದಾರೆ.ಈ ಕುರಿತು ಕುಟ್ರುಪಾಡಿ ಗ್ರಾಮದ ಸ್ಥಳೀಯ ನಿವಾಸಿಗಳು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಹಿಂದೂ ಜಾಗರಣೆ ವೇದಿಕೆಯ ಜಿಲ್ಲಾ ಮುಖಂಡ ರವಿರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಮನವಿಯನ್ನು ಕಡಬ ಠಾಣಾ ಸಬ್‌ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ಅವರಿಗೆ ಸಲ್ಲಿಸಿದ್ದಾರೆ.ಮಸೀದಿಯಲ್ಲಿ ಬಳಸುತ್ತಿರುವ ಕರ್ಕಶವಾದ ಧ್ವನಿವರ್ಧಕದಿಂದ ಇಲ್ಲಿಯ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಕೂಡಲೇ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
- Advertisement -


