Saturday, June 6, 2026
Homeತಾಜಾ ಸುದ್ದಿನಾಗರಹೊಳೆ ಅಭಯಾರಣ್ಯದಲ್ಲಿ ಗಾಯಗೊಂಡಿರುವ ಮರಿಯಾನೆಗೆ ಚಿಕಿತ್ಸೆ: ರಾಹುಲ್ ಗಾಂಧಿ ಪತ್ರದ ಮೂಲಕ ಮಾಡಿದ ಮನವಿಗೆ ಸಿಎಂ...

ನಾಗರಹೊಳೆ ಅಭಯಾರಣ್ಯದಲ್ಲಿ ಗಾಯಗೊಂಡಿರುವ ಮರಿಯಾನೆಗೆ ಚಿಕಿತ್ಸೆ: ರಾಹುಲ್ ಗಾಂಧಿ ಪತ್ರದ ಮೂಲಕ ಮಾಡಿದ ಮನವಿಗೆ ಸಿಎಂ ಬೊಮ್ಮಾಯಿ ಸ್ಪಂದನೆ

- Advertisement -
- Advertisement -

ಬೆಂಗಳೂರು: ನಾಗರಹೊಳೆ ಅಭಯಾರಣ್ಯದಲ್ಲಿ ಗಾಯಗೊಂಡಿರುವ ಆನೆ ಮರಿಗೆ ಚಿಕಿತ್ಸೆ ನೀಡುವ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರದ ಮೂಲಕ ಮಾಡಿದ್ದ ಮನವಿಗೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ.

ರಾಹುಲ್ ಗಾಂಧಿ ಪತ್ರಕ್ಕೆ ಉತ್ತರ ಬರೆದಿರುವ ಸಿಎಂ ಬಸವರಾಜ ಬೊಮ್ಮಾಯಿ, ಈಗಾಗಲೇ ಆನೆಮರಿಗೆ ಸೂಕ್ತ ಚಿಕಿತ್ಸೆ ನೀಡುವ ಕೆಲಸ ನಮ್ಮ ಅಧಿಕಾರಿಗಳು ಮಾಡುತ್ತಿದ್ದು, ಕ್ರೂರ ಪ್ರಾಣಿಗಳ ದಾಳಿಗೆ ಒಳಗಾಗಿ ಗಾಯವಾಗಿದೆ. ಮರಿ ಆನೆ ಸದ್ಯ ತಾಯಿ ಆನೆಯ ಹಾಲಿನ ಆರೈಕೆಯಲ್ಲಿದೆ ಎಂದು ತಿಳಿಸಿದ್ದಾರೆ.

ಅಲ್ಲದೇ ಈ ಹಂತದಲ್ಲಿ ತಾಯಿಯನ್ನು ಬೇರ್ಪಡಿಸಿ ಚಿಕಿತ್ಸೆ ನೀಡುವುದು ಕಷ್ಟವಾಗಿರುವ ಕಾರಣ ಅವಶ್ಯಕವಾದ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ತಾಯಿಯೊಂದಿಗೆ ಮರಿ ಆನೆಯನ್ನು ನಮ್ಮ ಅಧಿಕಾರಿಗಳು ತೀವ್ರ ನಿಗಾ ಇಟ್ಟು ನೋಡಿಕೊಳ್ಳುತ್ತಿದ್ದಾರೆ ಎಂದು ಪತ್ರದ ಮೂಲಕ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಗಾಯದಿಂದ ಬಳಲುತ್ತಿದ್ದ ಮರಿ ಆನೆಗೆ ಶಸ್ತ್ರ ಚಿಕಿತ್ಸೆ ಕೊಡಿಸುವಂತೆ ಸಿಎಂಗೆ ಪತ್ರದ ಮೂಲಕ ರಾಹುಲ್ ಗಾಂಧಿ ಮನವಿ ಮಾಡಿದ್ದರು.

- Advertisement -

Latest News

error: Content is protected !!