Thursday, May 2, 2024
Homeತಾಜಾ ಸುದ್ದಿಭಾರತ್ ಜೋಡೋ ಪಾದಯಾತ್ರೆ ವೇಳೆ ಸಿದ್ದರಾಮಯ್ಯ- ರಾಹುಲ್ ಗಾಂಧಿ ಮಧ್ಯೆ ರನ್ನಿಂಗ್ ರೇಸ್; ಇಬ್ಬರಲ್ಲಿ ಗೆದ್ದೋರ್ಯಾರು?

ಭಾರತ್ ಜೋಡೋ ಪಾದಯಾತ್ರೆ ವೇಳೆ ಸಿದ್ದರಾಮಯ್ಯ- ರಾಹುಲ್ ಗಾಂಧಿ ಮಧ್ಯೆ ರನ್ನಿಂಗ್ ರೇಸ್; ಇಬ್ಬರಲ್ಲಿ ಗೆದ್ದೋರ್ಯಾರು?

spot_img
- Advertisement -
- Advertisement -

ಮಂಡ್ಯ: ಭಾರತ್ ಜೋಡೋ ಪಾದಾಯಾತ್ರೆಯಲ್ಲಿ ಇಂದು ರಾಹುಲ್ ಗಾಂಧಿ ಕೆಲವು ನಿಮಿಷಗಳ ಕಾಲ ರನ್ನಿಂಗ್ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಇಂದು ಸಂಜೆ ಪಾದಯಾತ್ರೆ ಮಾಡುತ್ತಿದ್ದ ರಾಹುಲ್ ಗಾಂಧಿ ಕೆಲವು ನಿಮಿಷಗಳ ಕಾಲ‌ ಓಡಿದರು.

ಇದೇ ವೇಳೆ ರಾಹುಲ್ ಗಾಂಧಿ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಾ ರಾಹುಲ್ ಗಾಂಧಿಗೆ ಸರಿ ಸಮನಾಗಿ ಓಡಿದರು. ಸಿದ್ದರಾಮಯ್ಯ ಫಿಟ್ನೆಸ್ ನೋಡಿ ಬೆನ್ನು ತಟ್ಟಿದ ರಾಹುಲ್ ಗಾಂಧಿ, ನಂತರ ಸಿದ್ದರಾಮಯ್ಯ ಕೈ ಹಿಡಿದುಕೊಂಡು ಕೆಲವು ಸೆಕೆಂಡ್ ಗಳ ಕಾಲ ಮತ್ತೆ ಓಡಿದರು.

ಸಿದ್ದರಾಮಯ್ಯ ಓಡಿದ್ದನ್ನು ನೋಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡಾ ಶಹಬ್ಬಾಸ್ ಗಿರಿ ನೀಡಿದರು. ಪಾದಯಾತ್ರೆ ವೇಳೆಯ ರನ್ನಿಂಗ್ ಫೋಟೋ ಅನ್ನು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!