Wednesday, June 3, 2026
Homeಕರಾವಳಿಮಂಗಳೂರು: ಪಿಲಿಕುಳ‌ ಜೈವಿಕ ಉದ್ಯಾನವನದ ಅವ್ಯವಸ್ಥೆ ಮತ್ತೊಮ್ಮೆ ಬಯಲು

ಮಂಗಳೂರು: ಪಿಲಿಕುಳ‌ ಜೈವಿಕ ಉದ್ಯಾನವನದ ಅವ್ಯವಸ್ಥೆ ಮತ್ತೊಮ್ಮೆ ಬಯಲು

- Advertisement -
- Advertisement -

ಮಂಗಳೂರು: ಪಿಲಿಕುಳ‌ ಜೈವಿಕ ಉದ್ಯಾನವನ ಅವ್ಯವಸ್ಥೆಯ ಆಗರವಾಗಿದೆ ಅನ್ನೋ ವಿಚಾರ ಆಗಾಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಅಲ್ಲಿನ ದುರಾವಸ್ಥೆ ಮತ್ತೊಮ್ಮೆ ಬಟಾಬಯಲಾಗಿದೆ. ಇರುವೆ ಕಾಟದಿಂದ ತಪ್ಪಿಸಿಕೊಳ್ಳಲು ಹಾವೊಂದು ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ ಪಟ್ಟೆ ಶೀಘ್ರಗಾಮಿ ಹಾವು ಇರುವೆ ಹಿಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಪರದಾಡಿದೆ.  ಇರುವೆ ದಾಳಿಯಿಂದ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಉದ್ಯಾನವನಕ್ಕೆ ಭೇಟಿ ನೀಡಿದ ಪ್ರವಾಸಿರು ವಿಡಿಯೋ ಸೆರೆ ಹಿಡಿದಿದು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ.

ಇದೀಗ ವಿಡಿಯೋ ವೈರಲ್ ಆಗಿದ್ದು ಉದ್ಯಾನವನದ ಸಿಬ್ಬಂದಿಯ ನಿರ್ಲಕ್ಷ್ಯ ದ ಬಗ್ಗೆ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest News

error: Content is protected !!