Friday, June 5, 2026
Homeಕರಾವಳಿಉಡುಪಿ“ನಾನು ಮಾತನಾಡುವುದಿಲ್ಲ, ನನ್ನ ಕೆಲಸವೇ ಎಲ್ಲವನ್ನೂ ಹೇಳುತ್ತೆ”: ಸಿದ್ದರಾಮಯ್ಯ ಟೀಕೆಗೆ ಸಿಎಂ ತಿರುಗೇಟು

“ನಾನು ಮಾತನಾಡುವುದಿಲ್ಲ, ನನ್ನ ಕೆಲಸವೇ ಎಲ್ಲವನ್ನೂ ಹೇಳುತ್ತೆ”: ಸಿದ್ದರಾಮಯ್ಯ ಟೀಕೆಗೆ ಸಿಎಂ ತಿರುಗೇಟು

- Advertisement -
- Advertisement -

ಉಡುಪಿ: ರಾಜ್ಯದ ಪ್ರಸಕ್ತ ಬೆಳವಣಿಗೆಗಳ ವಿಚಾರವಾಗಿ ಸಿಎಂ ಮೌನಿ, ನಾಲಗೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ಸಿಎಂ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಉಡುಪಿಗೆ ಕಾರ್ಯಕ್ರಮಕ್ಕೆ ಆಗಮಿಸಿದ  ಸಿಎಂ ಬೊಮ್ಮಾಯಿ, ನಾವು ಮಾತನಾಡುವುದಿಲ್ಲ, ನಮ್ಮ ಆಕ್ಷನ್ ಮಾತನಾಡುತ್ತದೆ.ನಮಗೆ ವಿಪಕ್ಷಗಳಿಂದ ಕಲಿಯಬೇಕಾದದ್ದು ಏನೂ ಇಲ್ಲ. ಯಾವ ಸಂದರ್ಭದಲ್ಲಿ ಏನು ನಿರ್ಧಾರ, ಏನು ಕ್ರಮ ಕೈಗೊಳ್ಳಬೇಕು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ಇದ್ದಾಗ ಹಲವಾರು ಕೊಲೆಗಳಿಗೆ ಸಂಬಂಧಿಸಿದ ಕೇಸ್ ವಿತ್ ಡ್ರಾ ಮಾಡಿದ್ರು.‌ ಆರೋಪವಿರುವ ಸಂಸ್ಥೆಗಳನ್ನು ಜನಗಳನ್ನು ನೇರವಾಗಿ ಸರ್ಕಾರದ ಮಟ್ಟದಲ್ಲಿ ಕೈಬಿಟ್ಟಿದ್ದಾರೆ.ಬಹಲವಾರು ಜನರ ಕೇಸುಗಳನ್ನು ಇವರು ಕೈಬಿಟ್ಟಿದ್ದಾರೆ.ಬಈಗ ನಮಗೆ ಹೇಳುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ವಿರುದ್ಧ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ನೀವು ಅಧಿಕಾರದಲ್ಲಿದ್ದಾಗ ನಿಮ್ಮ ಕರ್ತವ್ಯಪ್ರಜ್ಞೆ  ಎಲ್ಲಿತ್ತು? ನಿಮ್ಮಿಂದ ಪಾಠ ಕಲಿಯಬೇಕಾದ್ದು ಏನೂ ಇಲ್ಲ.ನಮ್ಮ ರಾಜ್ಯದ ಶಾಂತಿ-ಸುವ್ಯವಸ್ಥೆ, ನಮ್ಮ ರಾಜ್ಯದ ಪ್ರಗತಿ ನಮಗೆ ಗೊತ್ತಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!