Saturday, June 6, 2026
Homeತಾಜಾ ಸುದ್ದಿತುಂಬು ಗರ್ಭಿಣಿ ನರ್ಸ್ ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಸಿಎಂ.ಯಡಿಯೂರಪ್ಪ

ತುಂಬು ಗರ್ಭಿಣಿ ನರ್ಸ್ ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಸಿಎಂ.ಯಡಿಯೂರಪ್ಪ

- Advertisement -
- Advertisement -

ಶಿವಮೊಗ್ಗ: 9 ತಿಂಗಳು ತುಂಬು ಗರ್ಭಿಣಿಯಾಗಿದ್ದರೂ ಕೆಲಸಕ್ಕೆ ರಜೆ ತೆಗೆದುಕೊಳ್ಳದೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ರೂಪಾ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದರು.

ಇದರ ಜತೆಗೆ ಕೂಡಲೇ ರಜೆ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದರು. ಶಿವಮೊಗ್ಗದ ಗಾಜನೂರು ಗ್ರಾಮದಿಂದ 60 ಕಿಮೀ ದೂರವಿರುವ ತೀರ್ಥಹಳ್ಳಿ ಪಟ್ಟಣಕ್ಕೆ ಪ್ರತಿದಿನ ಬಸ್‍ನಲ್ಲೇ ಪಯಣಿಸಿ ಸೇವೆ ಸಲ್ಲಿಸುತ್ತಿದ್ದಾರೆ.

9 ತಿಂಗಳು ಗರ್ಭಿಣಿಯಾಗಿದ್ದರೂ ಪ್ರತಿದಿನ ಸುಮಾರು 120 ಕಿಮೀ ಪ್ರಯಾಣ ಮಾಡುವ ಇವರು ಕೊರೊನಾ ವಾರಿಯರ್ಸ್ ಏನು ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ನರ್ಸ್ ಅವರ ಈ ಸೇವೆಯನ್ನು ಮೆಚ್ಚಿ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.

- Advertisement -

Latest News

error: Content is protected !!