- Advertisement -
- Advertisement -
ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಮಾಡಲಾಗಿದ್ದು ಎಲ್ಲಾ ಹಬ್ಬ, ಸಡಗರದ ದಿನಗಳು ಕಳೆಗುಂದಿದೆ. ಇಂದು ಮಂಗಳೂರಿನಲ್ಲಿ ಬಿಸು ಸಂಭ್ರಮವಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಶುಭ ದಿನಕ್ಕೆ ತುಳು ಭಾಷೆಯಲ್ಲಿ ಶುಭಾಷಯ ಕೋರಿದ್ದಾರೆ.
ಜನತೆಗೆ ಶುಭಾಕೋರಿ ಟ್ವೀಟ್ ಮಾಡಿರುವ ಅವರು, “ಬಿಸುವಿನ ದಿನ ಹೊಸ ಕನಸು, ಹೊಸ ಮನಸು, ಹೊಸ ತಿನಿಸು, ಎಲ್ಲವೂ ಹೊಸತಾಗಲಿ. ಈ ಹೊಸ ವರ್ಷದಲ್ಲಿ ಹಳೆಯ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೆ ಬಿಸುವಿನ ಶುಭಾಶಯಗಳು” ಎಂದು ತುಳು ಭಾಷೆಯಲ್ಲಿ ಹೇಳಿದ್ದಾರೆ.
- Advertisement -