Thursday, April 18, 2024
Homeತಾಜಾ ಸುದ್ದಿಮೇ 3 ತನಕ ದೇಶಾದ್ಯಂತ ಲಾಕ್‌ಡೌನ್ ವಿಸ್ತರಣೆ: ಪ್ರಧಾನಿ ಘೋಷಣೆ

ಮೇ 3 ತನಕ ದೇಶಾದ್ಯಂತ ಲಾಕ್‌ಡೌನ್ ವಿಸ್ತರಣೆ: ಪ್ರಧಾನಿ ಘೋಷಣೆ

spot_img
- Advertisement -
- Advertisement -

 ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದ 21 ದಿನಗಳ ಲಾಕ್‌ ಡೌನ್ ಅವಧಿ ಇಂದಿಗೆ ಮುಕ್ತಾಯವಾಗಿದೆ. ಈ ನಡುವೆ ಇಂದು ಪ್ರಧಾನಿ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಇದೇ ವೇಳೆ ಅವರು ಮಾತನಾಡುತ್ತ ಭಾರತದಾದ್ಯಂತ ಎರಡನೇ ಹಂತದ ಲಾಕ್‌ಡೌನ್‌ ಅನ್ನು ಮೇ 3ರ ತನಕ ವಿಸ್ತರಣೆ ಮಾಡಲಾಗುವುದು ಅಂಥ ಘೋಷಣೆ ಮಾಡಿದರು. ಇನ್ನು ಕೇಂದ್ರ ಸರ್ಕಾರಕ್ಕೂ ಮುನ್ನ ಒಡಿಶಾ, ಪಂಜಾಬ್, ಪಶ್ಚಿಮ ಬಂಗಾಳ, ತೆಲಂಗಾಣ, ಕರ್ನಾಟಕ ಲಾಕ್‍ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೊರೊನಾ ನಿಯಂತ್ರಣ ಮಾಡುವುದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿಯವರು ಇದು ಸೇರಿ ಮೂರನೇ ಬಾರಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದು ಏನು ?

ದೇಶವನ್ನು ರಕ್ಷಿಸಲು ಭಾರತದ ಜನರು ದಿನಗಳಿಂದ ಯಾವ ರೀತಿಯ ತೊಂದರೆಗಳನ್ನು ಸಹಿಸಿಕೊಳ್ಳುತ್ತಿದ್ದಾರೆಂದು ನನಗೆ ತಿಳಿದಿದೆ. ನೀವು ಆಹಾರ, ಕೆಲಸದ ತೊಂದರೆಗಳನ್ನು ಎದುರಿಸಿದ್ದೀರಿ, ಆದರೆ ನೀವು ಇನ್ನೂ ಹೋರಾಡಲು ನಿರ್ಧರಿಸಿದ್ದೀರಿ ಅಂತ ಹೇಳಿದರು. ಇದೇ ವೇಳೆ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿವಸವಾದ ಇಂದು ಪ್ರಧಾನಿ ಮೋದಿ ಅವರು ಶುಭಾಶಯ ಕೋರಿದರು. ವಿದೇಶದಿಂದ ಬಂದವರನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ನಿಮ್ಮ ನಿಮ್ಮ ಪರಿವಾರದ ಆರೋಗ್ಯಕ್ಕಾಗಿ ನಾನು ಪ್ರಾರ್ಥನೆ ಮಾಡುವೆ ಅಂತ ಹೇಳಿದರು. ವಿದೇಶಗಳಿಗೆ ಹೋಲಿಕೆ ಮಾಡಿದ್ರೆ ಕೋರಾನ ಹೋರಾಟದಲ್ಲಿ ನಾವು ಮುಂದೆ ಇದ್ದೇವೆ ಆಂತ ಹೇಳಿದರು. ವಿದೇಶಗಳಲ್ಲೂ ಕೂಡ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಿದರು. ಇನ್ನು ಸಾಮಾಜಿಕ ಅಂತರ ಎನ್ನುವುದು ಬಹಳ ಪ್ರಮುಖ ಪ್ರಮುಖವಾದ ಅಂಶವಾಗಿದೆ ಅಂತ ಹೇಳಿದರು. ಭಾರತವು ಯಾವುದೇ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡುವ ಮೊದಲೇ ಸ್ಕ್ರೀನಿಂಗ್ ಪ್ರಾರಂಭವಾಯಿತು ಅಂತ ಹೇಳಿದರು.ಭಾರತೀಯರ ಜೀವದ ಮುಂದೆ ಆರ್ಥಿಕತೆ ದೊಡ್ಡದಲ್ಲ ಅಂತ ಹೇಳಿದರು.

ಅವರ ಭಾಷಣದ ಮುಖ್ಯಾಂಶಗಳು:

  • ಮೇ 3 ರವರೆಗೂ (19 ದಿನಗಳ ಕಾಲ) ಲಾಕ್ ಡೌನ್ ಮುಂದುವರಿಕೆ
  • ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು
  • ಕೊರೊನಾ ಮಹಾಮಾರಿ ವಿರುದ್ಧ ನಾವೆಲ್ಲರೂ ಹೋರಾಟ ಮಾಡ್ತಿದ್ದೇವೆ. ಎಲ್ಲಾ ದೇಶವಾಸಿಗಳ ತಪಸ್ಸಿನಿಂದ ಕೊರೊನಾ ತಡೆಯಲು ಸಕ್ಸಸ್ ಆಗಿದ್ದೇವೆ
  • ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ನಮನ ಸಲ್ಲಿಸುತ್ತಿದ್ದೇನೆ
  • ಲಾಕ್ ಡೌನ್ ನಿಂದ ಕೆಲವರಿಗೆ ಊಟಕ್ಕೆ ತೊಂದರೆಯಾಯಿತು, ಓಡಾಟಕ್ಕೆ ಕಷ್ಟವಾಯಿತು. ನಿಮಗೆಲ್ಲ ಎಷ್ಟು ಕಷ್ಟವಾಗಿದೆ ಎಂದು ನನಗೆ ಗೊತ್ತಿದೆ
  • ವಿದೇಶದಿಂದ ಬಂದಿದ್ದ ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿದ್ದೇವೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ, ಕೊರೊನಾ ಸೋಂಕನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ
  • ಭಾರತದಲ್ಲಿ 550 ಕೇಸ್ ಇದ್ದಾಗ ಲಾಕ್ ಡೌನ್ ಘೋಷಣೆ ಆಯಿತು. ನಾವು ಆಯ್ಕೆ ಮಾಡಿಕೊಂಡ ಮಾರ್ಗ ಸರಿಯಾಗಿದೆ. ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನಿಂದ ಭಾರತಕ್ಕೆ ದೊಡ್ಡ ಲಾಭವಾಗಿದೆ
  • ಕೊರೊನಾ ವಿರುದ್ಧ ಹೋರಾಟ ಮತ್ತಷ್ಟು ಕಠಿಣ ಆಗಲಿದೆ. ಏಪ್ರಿಲ್ 20 ರವರೆಗೂ ಪರಿಶೀಲನೆ ನಡೆಸಲಾಗುವುದು. ಹಾಟ್ ಸ್ಪಾಟ್ ಗಳಲ್ಲಿ ಪರಿಸ್ಥಿತಿ ಬದಲಾಗದಿದ್ದರೆ, ಎಲ್ಲವೂ ಕೈಮೀರಲಿದೆ

- Advertisement -
spot_img

Latest News

error: Content is protected !!