Friday, June 5, 2026
Homeಪ್ರಮುಖ-ಸುದ್ದಿಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಬಿಸ್ವೈ

ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಬಿಸ್ವೈ

- Advertisement -
- Advertisement -

ಬೆಂಗಳೂರು : ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಬೆಳಗ್ಗೆ ಅವರ ಎರಡನೇ ಬಾರಿಯ ಕೋವಿಡ್ ವರದಿ ಬಂದಿದ್ದು ಅದರಲ್ಲಿ ನೆಗೆಟಿವ್ ಬಂದಿತ್ತು. ಹಾಗಾಗಿ ನಾಳೆ ಅವರು ಡಿಸ್ಚಾರ್ಜ್ ಆಗುತ್ತಾರೆ ಅಂತ ಹೇಳಲಾಗಿತ್ತು.ಆದರೆ ಇಂದೇ ಸಿಎಂ ಡಿಸ್ಟಾರ್ಜ್ ಆಗಿದ್ದಾರೆ.

ಇನ್ನು ಸಿಎಂ ಸಾಂವಿಧಾನಿಕ ಹುದ್ದೆಯಲ್ಲಿರುವ ಕಾರಣ ಮತ್ತು ಕೊರೋನಾ ವಾರಿಯರ್ ಅನ್ನುವ ಹಿನ್ನೆಲೆಯಲ್ಲಿ ಸಾಮಾನ್ಯ ಕೋವಿಡ್ ರೋಗಿಗಳಾಗಿ ಗುಣಮುಖರಾದವರಿಗೆ ಇರುವಷ್ಟು ಕ್ವಾರಂಟೈನ್ ನಿಯಮಗಳು ಇರುವುದಿಲ್ಲ.‌ ಹಾಗಾಗಿ ಅವರು ನಾಳೆಯಿಂದಲೇ ಕರ್ತವ್ಯಕ್ಕೆ ಹಾಜರಾಗಬಹುದು. ಸದ್ಯ ಎರಡು ದಿನ ವಿಶ್ರಾಂತಿ ಪಡೆದು ನಂತರ ಕೆಲಸ ಆರಂಭಿಸಬಹುದು ಎಂಬ ಮಾಹಿತಿ ಇದೆ. ಅಲ್ಲದೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರೋದಾಗಿ ಇನ್ನು ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು. “ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದೇನೆ. ನಿಮ್ಮೆಲ್ಲರ ಶುಭಹಾರೈಕೆಗಳಿಂದ ಗುಣಮುಖನಾಗಿದ್ದೇನೆ. ವೈದ್ಯರ ಸಲಹೆಯಂತೆ ಇನ್ನು ಕೆಲವು ದಿನ ಮನೆಯಲ್ಲೇ ಕ್ವಾರಂಟೈನ್ ನಲ್ಲಿ ಇರಲಿದ್ದೇನೆಆತ್ಮವಿಶ್ವಾಸ, ವೈದ್ಯಕೀಯ ಚಿಕಿತ್ಸೆಗಳಿಂದ ಕೊರೊನಾ ಗೆಲ್ಲಬಹುದು. ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ”, ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!