Tuesday, May 14, 2024
Homeತಾಜಾ ಸುದ್ದಿಅಮರನಾಥ ಗುಹೆಯ ಬಳಿ ಮೇಘ ಸ್ಫೋಟ: ಬಹುತೇಕ ಕನ್ನಡಿಗರು ಸುರಕ್ಷಿತರಾಗಿದ್ದಾರೆ:ಸಿಎಂ

ಅಮರನಾಥ ಗುಹೆಯ ಬಳಿ ಮೇಘ ಸ್ಫೋಟ: ಬಹುತೇಕ ಕನ್ನಡಿಗರು ಸುರಕ್ಷಿತರಾಗಿದ್ದಾರೆ:ಸಿಎಂ

spot_img
- Advertisement -
- Advertisement -

ಮರನಾಥ ಗುಹೆಯ ಬಳಿ ಮೇಘ ಸ್ಫೋಟ ಸಂಭವಿಸಿದ್ದು, ಸುಮಾರು ಹದಿನೈದು ಜನರು ಪ್ರಾಣಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪ್ರಾಥಮಿಕ ಮಾಹಿತಿಯ ಪ್ರಕಾರ ಯಾತ್ರೆಗೆ ತೆರಳಿದ್ದ ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಹದಿನೈದು ಜನ ಮರಣ ಹೊಂದಿದ ಸುದ್ದಿ ಬಂದಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಕನ್ನಡಿಗರು ಅಮರನಾಥ ಯಾತ್ರೆ ಹೋಗುತ್ತಾರೆ. ಈಗ ನಮಗೆ ಬಂದ ಮಾಹಿತಿಯ ಪ್ರಕಾರ ನೂರಕ್ಕೂ ಹೆಚ್ಚು ಜನ ಇದ್ದಾರೆ ಎಂದು ವಿವರಿಸಿದರು.

ಈ ಪೈಕಿ ಬಹುತೇಕ ಮಂದಿ ಸುರಕ್ಷಿತಾಗಿದ್ದಾರೆ. ಯಾವುದೇ ಅಹಿತಕರ ಘಟನೆಯ ಕುರಿತಾದ ಸುದ್ದಿ ಬಂದಿಲ್ಲ. ಹಾಗಿದ್ದರೂ ಅಲ್ಲಿನ ಜಮ್ಮು ಹಾಗೂ ಕಾಶ್ಮೀರದ ಆಡಳಿತಾಧಿಗಳು ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿ ಇದ್ದೇವೆ ಎಂದು ತಿಳಿಸಿದರು.

ಅಪಾಯದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹೆಲ್ಪ್ ಲೈನ್ ಕೂಡಾ ಓಪನ್ ಮಾಡಿದ್ದೇವೆ. ಈಗಾಗಲೇ ಹದಿನೈದು ಇಪ್ಪತ್ತು ಜನ ಕರೆ ಮಾಡಿದ್ದಾರೆ. ತಾವು ಇರುವ ಲೊಕೇಶನ್ ತಿಳಿಸಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮಾಡುತ್ತೇವೆ ಎಂದರು.

ಘಟನೆಯ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಹಾಗೂ ಇಂಡೋ ಟಿಬೆಟಿಯನ್ ಫೋರ್ಸ್ ಪರಿಹಾರ ಕಾರ್ಯದಲ್ಲಿ ತೊಡಗಿದೆ. ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೇರವಾಗಿ ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದಾರೆ. ಹೆಲ್ಪ್‌ ಲೈನ್‌ಗೆ ಕರೆ ಕೊಟ್ಟರೆ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಇನ್ನು ರಾಜ್ಯಾಧ್ಯಂತ ಮಳೆಯ ಅವಾಂತರದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾಧದ ಮೂಲಕ ಸಭೆ ನಡೆಸಿದ್ದೇನೆ. ಕೆಲವು ಕಡೆಗಳಲ್ಲಿ ಮಳೆ ಕಡಿಮೆ ಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಮಳೆ ಇನ್ನೂ ಮೂರು ನಾಲ್ಕು ದಿನ ಬರುವ ಸಾಧ್ಯತೆ ಇದೆ. ಇದರ ಅನ್ವಯ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದರು.

080-1070, 22340676 ಸಹಾಯವಾಣಿ ಸಂಖ್ಯೆಯನ್ನು ರಾಜ್ಯ ಸರ್ಕಾರ ನೀಡಿದ್ದು, ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗಾಗಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಶುಕ್ರವಾರ ಅಮರನಾಥ ಗುಹೆಯ ಬಳಿ ಮೇಘ ಸ್ಫೋಟದಿಂದ ಪ್ರವಾಹ ಉಂಟಾಗಿ ಯಾತ್ರಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ.

- Advertisement -
spot_img

Latest News

error: Content is protected !!