Friday, June 5, 2026
Homeತಾಜಾ ಸುದ್ದಿಸುಳ್ಯದಿಂದ ಅಮರನಾಥ ಯಾತ್ರೆ ಕೈಗೊಂಡ ಯಾತ್ರಿಕರು ಸುರಕ್ಷಿತ

ಸುಳ್ಯದಿಂದ ಅಮರನಾಥ ಯಾತ್ರೆ ಕೈಗೊಂಡ ಯಾತ್ರಿಕರು ಸುರಕ್ಷಿತ

- Advertisement -
- Advertisement -

ಸುಳ್ಯ: ಸುಳ್ಯದಿಂದ ಇತ್ತೀಚೆಗೆ ಅಮರನಾಥ ಯಾತ್ರೆ ಕೈಗೊಂಡಿರುವ 12 ಮಂದಿ ಯಾತ್ರಿಕರು ಸುರಕ್ಷಿತವಾಗಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಅಮರನಾಥ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿದೆ. ಯಾತ್ರೆಯಲ್ಲಿ ಪಾಲ್ಗೊಂಡಿರುವ ನಾವೆಲ್ಲರೂ ಯಾವುದೇ ತೊಂದರೆಗೆ ಸಿಲುಕಿಕೊಂಡಿಲ್ಲ . ನಾವು ಹನ್ನೆರಡು ಮಂದಿ ಸುರಕ್ಷಿತವಾಗಿ ಜಮ್ಮು ಕಾಶ್ಮೀರ ಸೇರಿದ್ದೇವೆ. ಸುಳ್ಳು ವದಂತಿಗೆ ನಮ್ಮ ಮನೆಯವರು ಆತಂಕ ಪಡಬೇಕಾಗಿಲ್ಲ.

ನಾವೆಲ್ಲರೂ ಅಮರನಾಥ ಯಾತ್ರೆ ಯಶಸ್ವಿಯಾಗಿ ಪೂರೈಸಿ ಮತ್ತೆ ಊರಿಗೆ ಹಿಂತಿರುಗುತ್ತೇವೆ ಎಂದು ಯಾತ್ರೆಯ ನೇತೃತ್ವ ವಹಿಸಿಕೊಂಡಿರುವ ಸಂಘಟಕ ಅಜ್ಜಾವರ ಗ್ರಾಮದ ವಿನಯ್ ನಾರಾಲು ಹಾಗೂ ರವಿರಾಜ್ ಕರ್ಲಪ್ಪಾಡಿ ಯವರು ಸಾಮಾಜಿಕ ಜಾಲತಾಣದ ಮೂಲಕ ಸಂದೇಶವನ್ನು ಕಳುಹಿಸಿದ್ದಾರೆ.

- Advertisement -

Latest News

error: Content is protected !!