Wednesday, June 24, 2026
Homeತಾಜಾ ಸುದ್ದಿಆರು ದಿನಗಳ ಜೈಲುವಾಸ ಅಂತ್ಯ: ಪರಪ್ಪನ ಅಗ್ರಹಾರದಿಂದ ರೇವಣ್ಣ ರಿಲೀಸ್

ಆರು ದಿನಗಳ ಜೈಲುವಾಸ ಅಂತ್ಯ: ಪರಪ್ಪನ ಅಗ್ರಹಾರದಿಂದ ರೇವಣ್ಣ ರಿಲೀಸ್

- Advertisement -
- Advertisement -

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್ ಕೇಸ್ನಲ್ಲಿ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಜೈಲುಪಾಲಾಗಿದ್ದ ಹೆಚ್‌.ಡಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ನಿನ್ನೆ ಷರತ್ತು ಬದ್ಧ ಜಾಮೀನು ಮಂಜೂರು ಆಗಿದ್ದು, ಇಂದು ಜೈಲಿನಿಂದ ರಿಲೀಸ್‌ ಆಗಿದ್ದಾರೆ. ಅಲ್ಲಿಗೆ ಆರು ದಿನಗಳ ಜೈಲುವಾಸ ಅಂತ್ಯವಾಗಿದೆ.

ಇನ್ನು ರೇವಣ್ಣ ಜೈಲಿನಿಂದ ಹೊರಬರ್ತಿದ್ದಂತೆ ಅವರ ಅಭಿಮಾನಿಗಳು ಜಯಘೋಷ ಹಾಕಿ ಸಂಭ್ರಮಿಸಿದ್ರು. ರೇವಣ್ಣ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ರು. ಈ ವೇಳೆ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯ್ತು. ನಂತರ ಮಾಧ್ಯಮಗಳತ್ತ ಕೈ ಮುಗಿದು ರೇವಣ್ಣ ಕಾರಿನಲ್ಲಿ ಮುಂದೆ ಸಾಗಿದರು. ಜೈಲಿನಿಂದ ಸೀದಾ ತಂದೆಯ ನಿವಾಸಕ್ಕೆ ರೇವಣ್ಣ ತೆರಳಿದ್ದಾರೆ. ರೇವಣ್ಣ ದೇವೇಗೌಡರ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಮನೆಮಂದಿಯೆಲ್ಲಾ ಭಾವುಕರಾದರು.

- Advertisement -

Latest News

error: Content is protected !!