- Advertisement -


- Advertisement -
ಮಂಗಳೂರು: ಉಳ್ಳಾಲದ ಸಜೀಪ ಪಡು ತಲೆಮೊಗರು ಮಸೀದಿ ಬಳಿ ಇತ್ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ.
ಮಸೀದಿ ವಿಚಾರದಲ್ಲಿ ತಕರಾರು ಎದ್ದಿದ್ದು, ಈ ಸಂದರ್ಭದಲ್ಲಿ ತಲವಾರು, ದೊಣ್ಣೆ, ಕಬ್ಬಿಣದ ರಾಡ್ ಬಳಸಿ ಹಲ್ಲೆ ಮಾಡಲಾಗಿದೆ. ಇನ್ನು ಈ ಬಗ್ಗೆ ದೂರು-ಪ್ರತಿದೂರು ಸೇರಿ 3 ಪ್ರಕರಣಗಳು ದಾಖಲು ಮಾಡಲಾಗಿದೆ. ಹಲ್ಲೆಯಿಂದ ಗಾಯಗೊಂಡವರಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ BNS ಮತ್ತು Arms Act ಅಡಿ ಪ್ರಕರಣ ದಾಖಲಾಗಿದೆ.
- Advertisement -


