Thursday, June 4, 2026
Homeಕರಾವಳಿಉಡುಪಿರೈಲು ಡಿಕ್ಕಿಯಾಗಿ ಉಡುಪಿಯಲ್ಲಿ ಅಪರೂಪದ ಕಪ್ಪು ಚಿರತೆ ಸಾವು

ರೈಲು ಡಿಕ್ಕಿಯಾಗಿ ಉಡುಪಿಯಲ್ಲಿ ಅಪರೂಪದ ಕಪ್ಪು ಚಿರತೆ ಸಾವು

- Advertisement -
- Advertisement -

ಉಡುಪಿ: ರೈಲು ಡಿಕ್ಕಿ ಹೊಡೆದು ಅಪರೂಪದ ಕಪ್ಪು ಚಿರತೆಯೊಂದು ಮೃತಪಟ್ಟ ಘಟನೆ ಕುಂದಾಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ಬೆಳಗ್ಗೆ ಬೈಂದೂರು ತಾಲೂಕು ನಾಡಾ ಗ್ರಾಮದ ಬಡಾಕೆರೆ ರೈಲ್ವೆ ಮೇಲ್ಸೇತುವ ಬಳಿ ಕಪ್ಪು ಚಿರತೆ ಪತ್ತೆಯಾಗಿತ್ತು. ಸುಮಾರು ನಾಲ್ಕು ವರ್ಷದ ಗಂಡು ಚಿರತೆಗೆ ರೈಲು ಡಿಕ್ಕಿ ಹೊಡೆದಿದೆ. ಆಹಾರ ಅರಸಿ ಬಂದ ಚಿರತೆಗೆ ರೈಲ್ವೆ ಮೇಲ್ಸೇತುವೆ ಬಳಿ ರೈಲು ಬರುತ್ತಿರುವಾಗ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಪ್ರಾಣ ಕಳೆದುಕೊಂಡಿದೆ.


ಮಾಹಿತಿ ತಿಳಿಯುತ್ತಲೇ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮತ್ತು ಸಿಬ್ಬಂದಿ ಚಿರತೆ ಶವ ವಶಕ್ಕೆ ಪಡೆದರು. ನಂತರ ವಂಡ್ಸೆ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಅವರ ಸಮಕ್ಷಮದಲ್ಲಿ ವನ್ಯಜೀವಿ ನಿಯಮದ ಪ್ರಕಾರ ಅಂತಿಮ ಸಂಸ್ಕಾರ ಮಾಡಲಾಯಿತು.

- Advertisement -

Latest News

error: Content is protected !!