Tuesday, May 7, 2024
Homeತಾಜಾ ಸುದ್ದಿಹೀಗೊಂದು ಅಪರೂಪದ ಮದುವೆ: ಸಮುದ್ರದೊಳಗೆ ಸತಿಪತಿಯಾದ ಜೋಡಿ

ಹೀಗೊಂದು ಅಪರೂಪದ ಮದುವೆ: ಸಮುದ್ರದೊಳಗೆ ಸತಿಪತಿಯಾದ ಜೋಡಿ

spot_img
- Advertisement -
- Advertisement -

ಚೆನ್ನೈ:  ಪ್ರತಿಯೊಬ್ಬರಿಗೂ ತಮ್ಮ  ಮದುವೆ ಹೀಗೆ ನಡೆಯಬೇಕು ಅನ್ನೋ ಕನಸುಗಳಿರುತ್ತವೆ. ಒಬ್ಬೊಬ್ಬರು ಒಂದೊಂದು ರೀತಿ ಮದುವೆಯಾಗ್ತಾರೆ. ಆದರೆ ಚೆನ್ನೈನಲ್ಲಿ ಜೋಡಿಯೊಂದು ಎಲ್ಲರಿಗಿಂತಲೂ ಸ್ಪೆಷಲ್ ಆಗಿ ವೈವಾಹಿಕ ಜೀವನಕ್ಕ ಕಾಲಿಟ್ಟಿದೆ.

ಹೌದು…ವಿ. ಚಿನ್ನದುರೈ ಹಾಗೂ ಎಸ್.​ ಶ್ವೇತಾ ಎಂಬವರು ನಿನ್ನೆ ನೀಲಂಕರೈ ಕಡಲ ತೀರದಲ್ಲಿ ವಿಶೇಷವಾಗಿ ಮದುವೆಯಾಗಿದ್ದಾರೆ. ನೀರಿನ ಒಳಗೆ ಹಿಂದೂ ಸಂಪ್ರದಾಯದಂತೆ ಈ ಜೋಡಿ ಮದುವೆಯಾಗಿದೆ. ನಾವು ಮುಹೂರ್ತದ ಸಮಯಕ್ಕೆ ಸರಿಹೊಂದುವಂತೆ ನೀರಿನೊಳಕ್ಕೆ ಇಳಿದೆವು. ಅಲ್ಲಿ ಮಾಲೆಯನ್ನ ಪರಸ್ಪರ ಬದಲಾಯಿಸಿಕೊಂಡು ಬೆಳಗಿನ ಜಾವ 7.30ಕ್ಕೆ ಸರಿಯಾಗಿ ತಾಳಿಯನ್ನ ಕಟ್ಟಿದೆ ಎಂದು ವರ ಚಿನ್ನದುರೈ ಹೇಳಿದ್ದಾರೆ. ಚಿನ್ನದುರೈ ವೃತ್ತಿಯಲ್ಲಿ ಟೆಕ್ಕಿಯಾಗಿದ್ದು, ಸ್ಕೂಬಾ ಡೈವಿಂಗ್​ ಪರವಾನಗಿ ಪಡೆದಿದ್ದಾರೆ.

ಶ್ವೇತಾ ಕೂಡ ಟೆಕ್ಕಿಯಾಗಿದ್ದು ಮದುವೆಗಾಗಿ ಕೆಲ ತಿಂಗಳಿನಿಂದ ಸ್ಕೂಬಾ ಡೈವಿಂಗ್​ ತರಬೇತಿಯನ್ನ ಪಡೆಯುತ್ತಿದ್ದಾರೆ. ನನಗೆ ಹಾಗೂ ನನ್ನ ಪೋಷಕರಿಗೆ ತುಂಬಾನೇ ಭಯ ಇತ್ತು. ನಮ್ಮ ಜೊತೆ ಇನ್ನೂ 8 ಮಂದಿ ಸ್ಕೂಬಾ ಡೈವರ್ಸ್​ ಸ್ಥಳದಲ್ಲಿ ಹಾಜರಿದ್ದರು. ನಾವು ಇದಕ್ಕಾಗಿ ಕಳೆದ ವಾರ ಪ್ರ್ಯಾಕ್ಟೀಸ್​ ಕೂಡ ಮಾಡಿದ್ದೆವು ಎಂದು ಶ್ವೇತಾ ಹೇಳಿದ್ದಾರೆ.

- Advertisement -
spot_img

Latest News

error: Content is protected !!