Wednesday, May 1, 2024
Homeಮನರಂಜನೆಇಂದು ನಟ ದಿವಂಗತ ಚಿರು ಸರ್ಜಾ ಬರ್ತಡೇ: ಭಾವನಾತ್ಮಕವಾಗಿ ವಿಶ್ ಮಾಡಿದ ಧ್ರುವ ಹಾಗೂ ಮೇಘನಾ...

ಇಂದು ನಟ ದಿವಂಗತ ಚಿರು ಸರ್ಜಾ ಬರ್ತಡೇ: ಭಾವನಾತ್ಮಕವಾಗಿ ವಿಶ್ ಮಾಡಿದ ಧ್ರುವ ಹಾಗೂ ಮೇಘನಾ ಸರ್ಜಾ

spot_img
- Advertisement -
- Advertisement -

ಬೆಂಗಳೂರು : ಚಿರಂಜೀವಿ ಸರ್ಜಾ ನಿಧನರಾದ ಬಳಿಕ ಇಂದು ಅವರ ಮೊದಲ ಹುಟ್ಟುಹಬ್ಬ. ಹೀಗಾಗಿ ಪತ್ನಿ ಮೇಘನಾ ರಾಜ್ ಸ್ಪೆಷಲ್ ವಿಡಿಯೋ ಹಂಚಿಕೊಂಡು ವಿಶ್ ಮಾಡಿದರೆ, ಧ್ರುವ ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಕಾಲ ಕಳೆದ ಚಿತ್ರಗಳನ್ನು ಹಂಚಿಕೊಂಡು ಶುಭಾಶಯ ತಿಳಿಸಿದ್ದಾರೆ.

ಪತ್ನಿ ಮೆಘನಾ ರಾಜ್ ಫೋಟೋ ಹಂಚಿಕೊಂಡು ಸಾಲುಗಳನ್ನು ಬರೆದಿದ್ದು, ಹ್ಯಾಪಿ ಬರ್ತ್ ಡೇ ಮೈ ವಲ್ರ್ಡ್ ಐ ಲವ್ ಯು ಫಾರ್ ಎವರ್ ಆ್ಯಂಡ್ ಆಲ್‍ವೇಸ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ಶುಭಾಶಯ ಕೋರಿದ್ದಾರೆ.

https://www.instagram.com/p/CGbiUHbHONL/?utm_source=ig_web_copy_link

ಇನ್ನು ನಿನ್ನೆ  ವಿಡಿಯೋವನ್ನು ಸಹ ಮೇಘನಾ ಹಂಚಿಕೊಂಡಿದ್ದರು. ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ ಎಂದು ಬರೆದುಕೊಂಡಿದ್ದರು. ಇದಕ್ಕೂ ಮೊದಲು ಜೂ. ಚಿರುವಿಗೆ ಸ್ವಾಗತ ಕೋರಿ ಕುಟುಂಬಸ್ಥರು ಮಾಡಿರುವ ವೀಡಿಯೋವನ್ನು ಕೂಡ ಮೇಘನಾ ಹಾಗೂ ಧ್ರುವ ಸರ್ಜಾ ಶೇರ್ ಮಾಡಿಕೊಂಡಿದ್ದರು. ಈ ಕುರಿತು ಸಾಕಷ್ಟು ಚರ್ಚೆ ಸಹ ನಡೆದಿತ್ತು.

ಚಿರು ಹುಟ್ಟುಹಬ್ಬದ ವಿಶೇಷವಾಗಿ ಕುಟುಂಬಸ್ಥರು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನೆಲಗುಳಿ ಗ್ರಾಮದ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಕುಟುಂಬಸ್ಥರು ಚಿರು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಚಿರಂಜೀವಿ ಸಮಾಧಿ ಬಳಿ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಿ ಆಗಮಿಸಿ, ಮೊಮ್ಮಗನ ಸ್ಮಾರಕಕ್ಕೆ ಹೂವು ಹಾಕಿದ್ದಾರೆ.

ಸಮಾಧಿ ಬಳಿ ಪೂಜೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಸಲಿದ್ದಾರೆ. ಇನ್ನು ನೋವಿನಲ್ಲೇ ಖುಷಿಯನ್ನ ಕೂಡ ಬರಮಾಡಿಕೊಳ್ಳಲು ಸರ್ಜಾ ಫ್ಯಾಮಿಲಿ ಸಜ್ಜಾಗಿದೆ. ಚಿರು ಬರ್ತ್ ಡೇಗೆ ರಾಜಮಾರ್ತಾಂಡ ಚಿತ್ರತಂಡ ಗಿಫ್ಟ್ ನೀಡಿದೆ. ಹಿರೋ ಇಂಟ್ರೊಡಕ್ಷನ್ ಸಾಂಗ್ ರಿಲೀಸ್ ಆಗಿದೆ. ಜೊತೆಗೆ ಕ್ಷತ್ರಿಯ ಚಿತ್ರ ಟೀಸರ್ ಕೂಡ ಇಂದೇ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!