Sunday, June 7, 2026
Homeತಾಜಾ ಸುದ್ದಿನನ್ನ ಕೈ ಬಿಡಬೇಡಿ ಎಂದು ಕಂಬಿನಿ ಮಿಡಿದ ಮೇಘನಾರಾಜ್ !

ನನ್ನ ಕೈ ಬಿಡಬೇಡಿ ಎಂದು ಕಂಬಿನಿ ಮಿಡಿದ ಮೇಘನಾರಾಜ್ !

- Advertisement -
- Advertisement -

ಬೆಂಗಳೂರು: ನಿನ್ನೆ ನಡೆದ ನಟ ಚಿರಂಜೀವಿ ಸರ್ಜಾರ ಅಂತ್ಯಕ್ರಿಯೆ ಸಮಯದಲ್ಲಿ ‘ನೀವೆಲ್ಲ ನನ್ನ ಕೈ ಬಿಡಬೇಡಿ. ಎಲ್ಲರೂ ನನ್ನ ಜೊತೆಗಿರಿ’ ಎಂದು ಭಾವುಕಳಾಗಿ ಮೇಘನಾರಾಜ್ ಗಂಡ ಚಿರಂಜಿವಿ ಸರ್ಜಾ ಮೃತದೇಹದ ಮುಂದೆ ಹೇಳುತ್ತಿದ್ದ ಮಾತು ನೆರೆದಿದ್ದ ಸಾವಿರಾರು ಅಭಿಮಾನಿಗಳು ಮತ್ತು ಹಿತೈಷಿಗಳನ್ನು ಭಾವುಕರನ್ನಾಗಿಸಿದ್ದು ಸುಳ್ಳಲ್ಲ.

ಈ ಸಮಯದಲ್ಲಿ ತಾಯಿಯಂಥ ಅತ್ತಿಗೆಯನ್ನು ಮೈದುನ ಧೃವ ಸರ್ಜಾ “ನಾವಿದ್ದೇವೆ ನೀವು ಧೈರ್ಯವಾಗಿರಿ,‌ ನಮ್ಮ ಜೊತೆ ಇರಿ ಎಂದು ಸಮಾಧಾನ ಮಾಡುತ್ತಿದ್ದ ಸನ್ನಿವೇಶ ಎಂತವರ ಕಣ್ಣಲ್ಲೂ ಒಂದು ಹನಿ ತರಿಸುವ ಘಟನೆಯಾಗಿತ್ತು.

ಸಾಯುವ ವಯಸ್ಸೇ ಆಲ್ಲದ ಹೊತ್ತಿನಲ್ಲಿ ಮೊನ್ನೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ 39 ರ ಹರೆಯದ ಚಿರಂಜೀವಿ ಸರ್ಜಾ ನಿನ್ನೆ ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ತಮ್ಮನ ಫಾರ್ಮ್ ಹೌಸ್ ನಲ್ಲಿ ಮಣ್ಣಲ್ಲಿ ಮಣ್ಣಾಗಿ ಲೀನವಾದರು. ಆದರೆ ಅವರ ನೆನಸಿಕೊಂಡು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳ ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂಥವರ ಮನಕಲಕುವಂತೆ ಮಾಡುತ್ತಿತ್ತು.

ಅದರಲ್ಲೂ ಗಂಡನ ಮೃತದೇಹದ ಮುಂದೆ ಕುಳಿತಿದ್ದ ಹೆಂಡತಿ ಮೇಘನಾರಾಜ್ ಪರಿಸ್ಥಿತಿ ನೋಡುತ್ತಿದ್ದರೆ ಎಂಥವರು ಸಹ ಅಯ್ಯೋ ಪಾಪ ಎಂದು ಕಣ್ಣೀರು ಹಾಕುತ್ತಿದ್ದರು.ಅಳು, ಮೌನ ಮತ್ತು ಧ್ಯಾನ!ಅಂತ್ಯಕ್ರಿಯೆ ಉದ್ದಕ್ಕೂ ಹೆಂಡತಿ ಮೇಘನಾರಾಜ್ ಅಳು, ಮೌನ, ಧ್ಯಾನ ಅವರನ್ನು ಆವರಿಸಿಕೊಂಡಿದ್ದರು. ಅವರಿಗೆ ಅವರೇ ಅದೆಷ್ಟು ಸಮಾಧಾನ ಮಾಡಿಕೊಂಡರೂ ಗಂಡ ಇನ್ನಿಲ್ಲ ಎನ್ನುವ ಸತ್ಯ ಅರಿತು ಮತ್ತೆ ಮತ್ತೆ ಕಣ್ಣಲ್ಲಿ ನೀರಿ ಧಾರೆಯಾಗಿ ಹರಿದುಬರುತ್ತಿತ್ತು.

ಗಂಡ ಚಿರಂಜೀವಿ ಸರ್ಜಾ ಮೃತದೇಹ ಅಂತ್ಯಕ್ರಿಯೆ ಮುಗಿಯುವವರೆಗೂ ಹೆಚ್ಚು ಮೌನಕ್ಕೆ ಶರಣಾದ ಮೇಘನಾ ಎಷ್ಟು ತಡೆಯಹಿಡಿದರೂ ಅಳು ಮತ್ತೆ ಮತ್ತೆ ಬರುತ್ತಿತ್ತು. ಇನ್ನೇನು ಮೃತದೇಹ ಮಣ್ಣು ಮಾಡುವ ಸಂದರ್ಭದಲ್ಲಿಯಂತೂ ಗಂಡನ ಮೃತದೇಹದ ಬಳಿ ಬಂದು ಹೆಂಡತಿ‌ ಮೇಘನಾ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಂಥವರ ಮನವನ್ನೂ ಕಲಕುತ್ತಿತ್ತು.

- Advertisement -

Latest News

error: Content is protected !!