Wednesday, April 24, 2024
Homeತಾಜಾ ಸುದ್ದಿಮುಸ್ಲಿಂ ಯುವಕನ ಜತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ಮದುವೆ

ಮುಸ್ಲಿಂ ಯುವಕನ ಜತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ಮದುವೆ

spot_img
- Advertisement -
- Advertisement -

ತಿರುವನಂತಪುರಂ: ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಮೊಹಮ್ಮದ್ ರಿಯಾಸ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿವಾಹವಾಗಲಿದ್ದಾರೆ ಎಂದು ಕೇರಳದ ಸ್ಥಳೀಯ ಪತ್ರಿಕೆಗಳು ಮಂಗಳವಾರ ವರದಿ ಮಾಡಿವೆ.

ರಿಯಾಸ್ ಅವರು ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಜೂನ್ 15ರಂದು ಅತ್ಯಂತ ಸಂಬಂಧಿಕರು ಮತ್ತು ಆಪ್ತ ಸ್ನೇಹಿತ ಬಳಗದ ಸಮ್ಮುಖದಲ್ಲಿ ಸರಳ ರೀತಿಯಲ್ಲಿ ಮದುವೆ ನೆರವೇರಲಿದೆ ಎಂದು ಮನೋರಮಾಆನ್‌ಲೈನ್ ವರದಿ ಮಾಡಿದೆ.

ಎಸ್‌ಎಫ್‌ಐ ವಿದ್ಯಾರ್ಥಿ ರಾಜಕೀಯದ ಮೂಲಕ ರಾಜಕೀಯ ಪ್ರವೇಶಿಸಿದ ಮೊಹಮ್ಮದ್ ರಿಯಾಸ್ ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷರಾಗಿದ್ದು 2009ರ ಲೋಕಸಭಾ ಚುನಾವಣೆಯಲ್ಲಿ ಅವರು ಕೋಯಿಕ್ಕೋಡ್ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ನಾಯಕ ಎಂ.ಕೆ. ರಾಘವನ್ ವಿರುದ್ಧ ಸೋತರು. ವೀಣಾ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯಮಿಯಾಗಿದ್ದಾರೆ.

- Advertisement -
spot_img

Latest News

error: Content is protected !!