Friday, June 5, 2026
Homeತಾಜಾ ಸುದ್ದಿಆಟವಾಡುವಾಗ ಕಾರಿನ ಡೋರ್ ಲಾಕ್ : ಒಳಗೆ ಸಿಲುಕಿಕೊಂಡು ಮೂವರು ಮಕ್ಕಳು ಉಸಿರುಗಟ್ಟಿ ಸಾವು

ಆಟವಾಡುವಾಗ ಕಾರಿನ ಡೋರ್ ಲಾಕ್ : ಒಳಗೆ ಸಿಲುಕಿಕೊಂಡು ಮೂವರು ಮಕ್ಕಳು ಉಸಿರುಗಟ್ಟಿ ಸಾವು

- Advertisement -
- Advertisement -

ತಮಿಳುನಾಡು:ಕಾರಿನೊಳಗೆ ಮಕ್ಕಳು ಆಟವಾಡುತ್ತಿದ್ದಾಗ ಕಾರ್ ಡೋರ್ ಲಾಕ್ ಆಗಿ ಒಳಗೆ ಸಿಲುಕಿಕೊಂಡು ಮಕ್ಕಳು ಉಸಿರುಕಟ್ಟಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.

ನಾಗರಾಜ ಎಂಬುವರ ಮಕ್ಕಳಾದ ನಿತೀಶ್ ಮತ್ತು ನಿತೀಶಾ ಹಾಗೂ ಸುಧಾಕರ್ ಎಂಬುವರ ಮಗ
ಕಪಿಚಂದ್ ಮೃತ ಮಕ್ಕಳು.

ತಿರುನೆಲ್ವೇಲಿ ಜಿಲ್ಲೆಯ ಪಾನಕುಡಿ ಸಮೀಪದ ವಸತಿ ಪ್ರದೇಶದಲ್ಲಿ ನಾಗರಾಜನ ಸಹೋದರ ಮಣಿಕಂದನ್‌ಗೆ ಸೇರಿದ ಕಾರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಕಾರಿನ ಡೋರ್‌ ಲಾಕ್‌ ಆಗಿದ್ದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಮಕ್ಕಳು ಬೊಬ್ಬೆ ಹಾಕಿದರೂ ಯಾರಿಗೂ ಕೇಳಿಸಲಿಲ್ಲ‌.ಹೀಗಾಗಿ ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!