- Advertisement -
![]()
- Advertisement -
ಮಂಗಳೂರು: ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಬಿರುಸು ಪಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂ. 5ರಿಂದ 8ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರವಿವಾರ ಬೆಳಗ್ಗೆ ಮಂಗಳೂರಿನಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಶನಿವಾರ ಬೆಳಗ್ಗೆ ಕರಾವಳಿಯ ವಿವಿಧೆಡೆ ಗುಡುಗು ಸಹಿತ ಮಳೆ ಬಂದಿದೆ. ಹಗಲಿನ ವೇಳೆಯಲ್ಲಿ ಮೋಡ, ಬಿಸಿಲಿನ ವಾತಾವರಣವು ಜಿಲ್ಲೆಗಳಲ್ಲಿತ್ತು.
ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ರವಿವಾರ ಮತ್ತು ಸೋಮವಾರವೂ ಮಳೆಯಾಗುವ ಸಂಭವವಿರುವುದರಿಂದ ಇಲ್ಲಿಯೂ ಇಲಾಖೆ ಎಲ್ಲೋ ಎಲರ್ಟ್ ಘೋಷಿಸಿದೆ.
- Advertisement -


