Saturday, August 29, 2026
Homeತಾಜಾ ಸುದ್ದಿಶೋಭಾ ಕರಂದ್ಲಾಜೆ ಹೆಸರಿನಲ್ಲಿ ಓಪನ್ ಆಯ್ತು ಚಿಕನ್, ಮಟನ್ ಸೆಂಟರ್!

ಶೋಭಾ ಕರಂದ್ಲಾಜೆ ಹೆಸರಿನಲ್ಲಿ ಓಪನ್ ಆಯ್ತು ಚಿಕನ್, ಮಟನ್ ಸೆಂಟರ್!

- Advertisement -
- Advertisement -

ಕೊಪ್ಪಳ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಪ್ಪಟ ಅಭಿಮಾನಿಯೊಬ್ಬ ಅವರ ಹೆಸರಿನಲ್ಲಿ ಚಿಕನ್ ಮತ್ತು ಮಟನ್ ಶಾಪ್ ತೆರೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಶೋಭಾ ಕರಂದ್ಲಾಜೆ ಚಿಕನ್ ಮತ್ತು ಮಟನ್ ಸೆಂಟರ್ ಆರಂಭವಾಗಿದೆ.

ಖಾದಿರ್ ಕಲಾಲ್ ಎಂಬ ಅಭಿಮಾನಿ ಯುವಕ ಶೋಭಾ ಕರಂದ್ಲಾಜೆ ಹೆಸರಿನಲ್ಲಿ ಮಾಂಸ ಮಾರಾಟದ ಅಂಗಡಿ ತೆರೆದಿದ್ದಾರೆ.

2008 ರಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆಂದು ಕುಕನೂರು ಪಟ್ಟಣಕ್ಕೆ ಶೋಭಾ ಕರಂದ್ಲಾಜೆ ಬಂದಿದ್ದ ವೇಳೆ‌ ಅವರ ಭಾಷಣ ಕೇಳಿ ಖಾದಿರ್ ಅಭಿಮಾನಿಯಾಗಿದ್ದರು.

ಖಾದಿರ್ ಕಲಾಲ್ ಈ ಹಿಂದೆ ತನ್ನ ಕೈ ಮೇಲೆ ಶೋಭಾ ಕರಂದ್ಲಾಜೆ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು‌.

- Advertisement -

Latest News

error: Content is protected !!