Monday, April 29, 2024
Homeಕರಾವಳಿಉಡುಪಿಮೇಕ್ ಮೈ ಟ್ರಿಪ್ ಹೆಸರಲ್ಲಿ 23 ಲಕ್ಷ ರೂ.ಗೂ ಹೆಚ್ಚು ವಂಚನೆ

ಮೇಕ್ ಮೈ ಟ್ರಿಪ್ ಹೆಸರಲ್ಲಿ 23 ಲಕ್ಷ ರೂ.ಗೂ ಹೆಚ್ಚು ವಂಚನೆ

spot_img
- Advertisement -
- Advertisement -

ಉಡುಪಿ; ಮೇಕ್ ಮೈ ಟ್ರಿಪ್ ಹೆಸರಲ್ಲಿ 23 ಲಕ್ಷ ರೂ.ಗೂ ಹೆಚ್ಚು ವಂಚನೆ ಮಾಡಿರುವ ಘಟನೆ ಕೋಟದ ಕಾರ್ಕಡ ಗ್ರಾಮದಲ್ಲಿ ನಡೆದಿದೆ.

ಮೊಬೈಲ್‌ನ ಟೆಲಿಗ್ರಾಮ್ ಆಯಪ್ ನಿಂದ ಜೂ.3ರಂದು ಮಹಿಳೆಯೊಬ್ಬರ ಹೆಸರಿನ ಖಾತೆಯಿಂದ ಮೇಕ್ ಮೈ ಟ್ರಿಪ್ ಎಂಬ ಸಂದೇಶ ಬಂದಿದ್ದು, ಆಸಕ್ತಿ ಇದ್ದಲ್ಲಿ ಭಾಗವಹಿಸುವಂತೆ ಹೇಳಲಾಗಿತ್ತು.ವಂಚನೆಗೊಳಗಾದ ವ್ಯಕ್ತಿ ಆನ್‌ಲೈನ್ ಬುಕ್ಕಿಂಗ್ ಮಾಡುವ ಉದ್ದೇಶದಿಂದ ಅದರಲ್ಲಿ ಮುಂದುವರಿದು ವಂಚಕರು ಕಳುಹಿಸಿದ ವೆಬ್‌ಸೈಟ್ ಲಿಂಕ್‌ನಲ್ಲಿ ಕೋಡ್ ಬಳಸಿ ಜಾಯಿನ್ ಆಗಿದ್ದರು.

ಮೇಕ್ ಮೈ ಟ್ರಿಪ್‌ನಲ್ಲಿ ಬುಕ್ಕಿಂಗ್ ಮಾಡಿ, ಅದರ ಮೊತ್ತವನ್ನು ಮೊದಲಿಗೆ ಪಾವತಿ ಮಾಡಿದರೆ ಬುಕ್ಕಿಂಗ್ ಆಧರಿಸಿ ಕಮಿಷನ್ ಸೇರಿ ಸಂದಾಯ ಮಾಡಿದ ಮೊತ್ತವು ವಾಲೆಟ್ ಅಕೌಂಟ್‌ನಲ್ಲಿ ಕಾಣಿಸುವುದಾಗಿ ವಂಚಕರು ತಿಳಿಸಿದ್ದರು.

ಅದನ್ನು ನಂಬಿದ ಈ ವ್ಯಕ್ತಿ ಜೂ. 18ರಂದು ರೂ. 11 ಸಾವಿರ, 19 ರಂದು 22 ಸಾವಿರ, 20ರಂದು 47,825 ರೂ., 21ರಂದು 1,09,178 ರೂ., 24ರಂದು 2,39,587 ರೂ., 25ರಂದು 6,05,081 ರೂ., 26ರಂದು 8,90,000 ರೂ., 27ರಂದು 4,64,610 ರೂ. ರಂತೆ ಹಣವನ್ನು ಸೈಬರ್ ವಂಚಕರು ಹಂತ ಹಂತವಾಗಿ ಪಾವತಿಸುವಂತೆ ಹೇಳಿದ್ದಾರೆ.

ಬ್ಯಾಂಕ್‌ಗಳ ಅಂಕೌಂಟ್‌ನಿಂದ ಹಂತ ಹಂತವಾಗಿ ಅವರು ಹೇಳಿದಷ್ಟು ಹಣವನ್ನು ಪಾವತಿ ಮಾಡಿದ್ದು, 30ನೇ ಟಾಸ್ಕ್ ಮುಕ್ತಾಯ ಮಾಡಿದ ಬಳಿಕ ಹಣ ಹಿಂದಿರುಗಿಸುವಂತೆ ಸಂದೇಶ ಕಳುಹಿಸಿದಾಗ ಸರಕಾರದ ನಿಯಮಾನುಸಾರ ಗರಿಷ್ಠ ಮೊತ್ತದ ಅರ್ಧ ಹಣ ಅಂದರೆ 16,05,231 ರೂ. ಮೊತ್ತವನ್ನು ಮತ್ತೆ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಈವರೆಗೆ ಸಂದಾಯ ಮಾಡಿದ ಎಲ್ಲಾ ಹಣವೂ ಲ್ಯಾಪ್ಸ್ ಆಗುತ್ತದೆ ಎಂಬುದಾಗಿ ಹೇಳಿದ್ದಾರೆ.

ಇನ್ನು ಹೆಚ್ಚಿಗೆ ಹಣ ಪಾವತಿ ಮಾಡಲು ಸಾಧ್ಯವಿಲ್ಲವೆಂದು ಹೇಳಿದಾಗ, ಜುಲೈ 10ರ ಅಂತಿಮ ಗಡುವು ನೀಡಿದ್ದು, ಆ ದಿನ ಒಳಗಾಗಿ ಹಣ ಸಂದಾಯ ಮಾಡದೇ ಇದ್ದಲ್ಲಿ ಬ್ಯುಸಿನೆಸ್ ಟ್ರಾನ್ಸಾಕ್ಷನ್ ವಾಲೆಟ್ ಲಾಪ್ಸ್ ಆಗುವುದಾಗಿ ಹೇಳಿದ್ದಾರೆ. ಹೀಗೆ ಟೆಲಿಗ್ರಾಮ್ ಆಯಪ್‌ನಲ್ಲಿ ಹಂತಹಂತವಾಗಿ ಪುಸಲಾಯಿಸಿ ಒಟ್ಟು 23,71,456 ರೂ. ಹಣವನ್ನು ತಮ್ಮ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಲಾಗಿದೆ. ಈ ಕುರಿತು ಕೋಟ ಠಾಣಾ ಪೊಲೀಸರು ಐಟಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!