Wednesday, June 24, 2026
Homeಕರಾವಳಿಪುತ್ತೂರು;  ಫೈನಾನ್ಸ್ ನಿಂದ ಸಾಲ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು;  ಫೈನಾನ್ಸ್ ನಿಂದ ಸಾಲ ಪಡೆದು ವಂಚಿಸಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಪುತ್ತೂರು; ಫೈನಾನ್ಸ್‌ವೊಂದರಿಂದ ಸಾಲ ಪಡೆದು ಸಾಲ ತೀರಿಸದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಪೊಳಲಿಯಿಂದ ಬಂಧಿಸಿದ್ದಾರೆ.

ಮೂಲತಃ ಮಂಗಳೂರು ಕುದ್ರೋಳಿ ನಿವಾಸಿಯಾಗಿದ್ದು ಬಂಟ್ವಾಳದ ಗಂಜಿಮಠ ಗ್ರಾಮದ ಪೊಳಲಿ ಗುರಿಕಂಬಳ ರೋಡ್ ನಿವಾಸಿ ಯಾಸೀನ್ ಅಹಮ್ಮದ್ ಬಂಧಿತ ಆರೋಪಿ.

2014ರಲ್ಲಿ ಬಂಟ್ವಾಳದ ಶ್ರೀರಾಮ ಫೈನಾನ್ಸ್ ನಿಂದ ಸಾಲ ಪಡೆದು ಬಳಿಕ ಸಾಲಕ್ಕೆ ನೀಡಿದ ಚೆಕ್ ಬೌನ್ಸ್ ಕೇಸು ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿ ಸುಮಾರು 7 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ಯಾಸೀನ್ ಅಹಮ್ಮದ್ ತಲೆ ಮರೆಸಿಕೊಂಡಿದ್ದ. ಹೀಗಾಗಿ ನ್ಯಾಯಾಲಯ ಆರೋಪಿ ವಿರುದ್ಧ ವಾರೆಂಟ್ ಜಾರಿ ಮಾಡಿತ್ತು.

ಅದರಂತೆಪುತ್ತೂರುಪೊಲೀಸರು ಆರೋಪಿಯನ್ನು ಫೆ.20ರಂದು ಎ.ಎಸ್.ಐ ಚಂದ್ರ ಮತ್ತು ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ ಅವರು ಆರೋಪಿಯನ್ನು ಪೊಳಲಿಯಲ್ಲಿ ಬಂಧಿಸಿದ್ದಾರೆ.

- Advertisement -

Latest News

error: Content is protected !!