Thursday, June 4, 2026
Homeಕರಾವಳಿಚರಣ್ ರಾಜ್ ರೈ ಕೊಲೆ ಪ್ರಕರಣ : ಪ್ರಮುಖ ಆರೋಪಿ ಕಲ್ಲಡ್ಕ ಕಿಶೋರ್ ಪೂಜಾರಿಯ ಬಂಧನ

ಚರಣ್ ರಾಜ್ ರೈ ಕೊಲೆ ಪ್ರಕರಣ : ಪ್ರಮುಖ ಆರೋಪಿ ಕಲ್ಲಡ್ಕ ಕಿಶೋರ್ ಪೂಜಾರಿಯ ಬಂಧನ

- Advertisement -
- Advertisement -

ಪುತ್ತೂರು: ಮೊನ್ನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಕಾರ್ತಿಕ್ ಮೆರ್ಲ ಕೊಲೆ ಆರೋಪಿ ಚರಣ್ ರಾಜ್ ರೈಯನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಮೂವರನ್ನು ಬಂಧಿಸಲಾಗಿತ್ತು. ಇಂದು ಪ್ರಮುಖ ಆರೋಪಿ ಕಲ್ಲಡ್ಕ ಕಿಶೋರ್ ಪೂಜಾರಿ ಸೇರಿದಂತೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಕಿಶೋರ್ ಜೊತೆಗೆ ರಾಕೇಶ್ ಪಂಚೋಡಿ, ರೆಹಮತ್ ಬಲ್ನಾಡು ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಆಪ್ತ, ಹಾಗೂ ಸಂಬಂಧಿಯಾಗಿದ್ದ ಕಾರ್ತಿಕ್ ಮೆರ್ಲ ನನ್ನು ಚರಣ್ ರಾಜ್ ಕೊಲೆಗೈದ ರಿವೇಂಜ್ ಗಾಗಿಯೇ ಕಿಶೋರ್ ಪೂಜಾರಿ ಚರಣ್ ರಾಜ್ ರೈ ಯನ್ನು ಕೊಲೆಗೈದಿದ್ದಾನೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

- Advertisement -

Latest News

error: Content is protected !!