Thursday, June 4, 2026
Homeಕರಾವಳಿಉಡುಪಿಉಡುಪಿ: ಕಾರುಗಳಲ್ಲಿ ಬಂದು ದರೋಡೆಗೆ ವಿಫಲ ಯತ್ನ; ಸಿಸಿ ಟಿವಿ ಸರ್ವೈಲೆನ್ಸ್ ನಿಂದ ತಪ್ಪಿದ ದರೋಡೆ

ಉಡುಪಿ: ಕಾರುಗಳಲ್ಲಿ ಬಂದು ದರೋಡೆಗೆ ವಿಫಲ ಯತ್ನ; ಸಿಸಿ ಟಿವಿ ಸರ್ವೈಲೆನ್ಸ್ ನಿಂದ ತಪ್ಪಿದ ದರೋಡೆ

- Advertisement -
- Advertisement -

ಉಡುಪಿ: ಕಾರುಗಳಲ್ಲಿ ಬಂದಿದ್ದ ತಂಡ ಮನೆಯೊಂದರ ಮೇಲೆ ದಾಳಿ ನಡೆಸಿ ದರೋಡೆಗೆ ವಿಫಲ‌ ಯತ್ನ ನಡೆಸಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದಿದೆ.ಬ್ರಹ್ಮಾವರ ತಾಲೂಕಿನ ತೆಕ್ಕಟ್ಟೆಯ ಕವಿತಾ ಎಂಬವರ ಮನೆಯಲ್ಲಿ ಬೆಳಗ್ಗೆ 8:30ರ ಸಮಯದಲ್ಲಿ ಈ ಘಟನೆ ನಡೆದಿದೆ.

ಕವಿತಾ ಎನ್ನುವವರ ಮನೆಯ ಮೇಲೆ ದಾಳಿ ಮಾಡಿದ ಎರಡು ಕಾರುಗಳಲ್ಲಿ ಬಂದಿದ್ದ ಗ್ಯಾಂಗ್ ಕಾಂಪೌಂಡ್ ಹಾರಿ ಒಳಪ್ರವೇಶಿಸಿದೆ.‌ ಈ ವೇಳೆ ಮನೆಯ ಸುತ್ತಲೂ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ವ್ಯವಸ್ಥೆಯ ಸೆಕ್ಯೂರಿಟಿ ಸಂಸ್ಥೆ ಎಚ್ಚರಿಸಿದ್ದ ಕಾರಣ ಕವಿತಾ ಮನೆಯ ಬಾಗಿಲು ತೆರೆದಿರಲಿಲ್ಲ ಎನ್ನಲಾಗಿದೆ.

ಮನೆಯ ಕಾಂಪೌಂಡ್ ಹಾರಿ ಒಳ ಪ್ರವೇಶಿಸಿದ್ದ ಎಂಟು ಜನರ ತಂಡ ಕೆಲವು ವಸ್ತುಗಳಿಗೆ ಹಾನಿ ಮಾಡಿ ತೆರಳಿದೆ.ಘಟನೆ ಕುರಿತು ಮನೆಯ ಮಾಲಕಿ ಕವಿತಾ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎರಡು ತಂಡಗಳನ್ನು ರಚಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!