Thursday, June 4, 2026
Homeಉತ್ತರ ಕನ್ನಡಹತ್ತು ಎಕರೆ ಗೇರು ನೆಡುತೋಪಿಗೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

ಹತ್ತು ಎಕರೆ ಗೇರು ನೆಡುತೋಪಿಗೆ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ

- Advertisement -
- Advertisement -

ಕಾರವಾರ: ಗೇರು ನೆಡುತೋಪಿಗೆ ಆಕಸ್ಮಿಕ ಬೆಂಕಿ ಬಿದ್ದು ಹತ್ತು ಎಕರೆಗೂ ಅಧಿಕ ಗೇರು ನೆಡುತೋಪು ಬೆಂಕಿಗೆ ಆಹುತಿಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನದಲ್ಲಿ ನಡೆದಿದೆ.

ಮಿರ್ಜಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡ್ಕಣಿ ಕ್ರಾಸ್ ಬಳಿ ಘಟನೆ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ಅರಣ್ಯ ಇಲಾಖೆಯಿಂದ ಸುಬ್ರಾಯ ಶೆಟ್ಟಿ ಎಂಬವರು ಟೆಂಡರ್ ಮೂಲಕ ಪಡೆದುಕೊಂಡಿದ್ದ ನೆಡುತೋಪಿಗೆ ಬೆಂಕಿ ಬಿದ್ದಿದೆ. ‌ಬೆಂಕಿ ತಗುಲಿದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ‌

ಸುಮಾರು ಮೂರು ತಾಸು ಹರ ಸಾಹಸಪಟ್ಟು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ‌

- Advertisement -

Latest News

error: Content is protected !!