Monday, May 13, 2024
Homeಅಪರಾಧಗ್ಯಾಸ್ ರಿಪೇರಿಗೆಂದು ಬಂದು ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ: ಉಳ್ಳಾಲದಲ್ಲಿ ಆರೋಪಿಯ ಬಂಧನ

ಗ್ಯಾಸ್ ರಿಪೇರಿಗೆಂದು ಬಂದು ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ: ಉಳ್ಳಾಲದಲ್ಲಿ ಆರೋಪಿಯ ಬಂಧನ

spot_img
- Advertisement -
- Advertisement -

ಮಂಗಳೂರು: ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹರೇಕಳದ ಆಲಡ್ಕದ ನಿಜಾಂ(31) ಎಂಬಾತನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 16 ರಂದು ಅಂಗನವಾಡಿಗೆ ಗ್ಯಾಸ್ ಸ್ಟವ್ ರಿಪೇರಿಗೆಂದು ನಿಜಾಂನನ್ನು ಕರೆಸಲಾಗಿತ್ತು. ಈ ವೇಳೆ ಅಂಗನವಾಡಿ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೂಡಲೇ ಅಂಗನವಾಡಿ ಶಿಕ್ಷಕಿಗೆ ಮಾಹಿತಿ ನೀಡಿದ ಸಹಾಯಕಿ ಬಳಿಕ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ ಪೊಲೀಸರು ನಿಜಾಂನನ್ನು ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -
spot_img

Latest News

error: Content is protected !!