- Advertisement -
![]()
- Advertisement -
ಉಡುಪಿ : ವಿದ್ಯಾರ್ಥಿಯೊಬ್ಬನಿಗೆ ಮಾನಸಿಕ ಹಿಂಸೆ ನೀಡಿದ ಆರೋಪದಡಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ನಿಟ್ಟೂರಿನ ಸಿಲಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನ.3ರಂದು ಬೆಳಗ್ಗೆ 17 ವರ್ಷದ ನೊಂದ ವಿದ್ಯಾರ್ಥಿ ತರಗತಿಯಲ್ಲಿ ಇರುವಾಗ ಯಾರೋ ವಿದ್ಯಾರ್ಥಿಗಳು ಸಿಡಿಮದ್ದನ್ನು ಸಿಡಿಸಿದ್ದರೆನ್ನಲಾಗಿದೆ. ತರಗತಿಯಲ್ಲಿ ಸಿಡಿಮದ್ದನ್ನು ಸಿಡಿಸಿದ್ದ ವಿದ್ಯಾರ್ಥಿಗಳು ಅವರ ತಪ್ಪನ್ನು ಕಾಲೇಜಿನ ಪ್ರಾಂಶುಪಾಲರ ಮುಂದೆ ಒಪ್ಪಿಕೊಂಡಿದ್ದರು.
ಆದರೂ ಕೂಡ ಪ್ರಾಂಶುಪಾಲರು ಯಾವುದೇ ತಪ್ಪನ್ನು ಮಾಡದ ನೊಂದ ವಿದ್ಯಾರ್ಥಿಯನ್ನು ತರಗತಿಯ ಹೊರಗಡೆ ಸುಮಾರು 3 ತಾಸು ನಿಲ್ಲಿಸಿ ನೀರು ಕೊಡದೆ ಶಿಕ್ಷಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿ ಮಾನಸಿಕವಾಗಿ ನೊಂದು ಕಾಲೇಜಿಗೆ ಪ್ರತಿದಿನ ಭಯದಲ್ಲೇ ಹೋಗುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
- Advertisement -


