Wednesday, July 15, 2026
Homeಕರಾವಳಿಮಂಗಳೂರುಪುತ್ತೂರು: ಒಂದೂವರೆ ತಿಂಗಳ ಹಸುಳೆ ಸಾ*ವು

ಪುತ್ತೂರು: ಒಂದೂವರೆ ತಿಂಗಳ ಹಸುಳೆ ಸಾ*ವು

- Advertisement -
- Advertisement -

ಪುತ್ತೂರು: ಒಂದೂವರೆ ತಿಂಗಳ ಪುಟ್ಟ ಕಂದಮ್ಮವೊಂದು ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಗುತ್ತಿಗಾರು ಗ್ರಾಮದ ಕಮಿಲ ಮಾಧವ-ವೀಣಾ ದಂಪತಿಯ ಒಂದೂವರೆ ತಿಂಗಳ ಗಂಡು ಮಗು ನಿಶ್ಚಿತ್ ಮೃತ ಕಂದಮ್ಮ.

ವೀಣಾ ಅವರು ಮಗುವಿನೊಂದಿಗೆ ಸವಣೂರಿನ ಪುಣ್ಚಪ್ಪಾಡಿ ಗ್ರಾಮದ ಓಡಂತರ್ಯದ ತವರು ಮನೆಯಲ್ಲಿದ್ದರು.ಡಿ. 5ರಂದು ಮಗುವಿಗೆ ವಾಂತಿ ಆರಂಭವಾಗಿದ್ದು ಕುಂಬ್ರದ ಕ್ಲಿನಿಕ್‌ನಿಂದ ಔಷಧ ತಂದಿದ್ದರು. ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಪುತ್ತೂರಿನ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು.ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!