Wednesday, June 3, 2026
Homeತಾಜಾ ಸುದ್ದಿಮಂಗಳೂರು: ನದಿಗೆ ಕಸ ಎಸೆದ ಮಹಿಳೆ ಮತ್ತು ಕಾರನ್ನು ಪತ್ತೆಹಚ್ಚಿದ ಪೊಲೀಸರು

ಮಂಗಳೂರು: ನದಿಗೆ ಕಸ ಎಸೆದ ಮಹಿಳೆ ಮತ್ತು ಕಾರನ್ನು ಪತ್ತೆಹಚ್ಚಿದ ಪೊಲೀಸರು

- Advertisement -
- Advertisement -

ಮಂಗಳೂರು: ಉಳ್ಳಾಲ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರು ಬಳಿ ಇರುವ ನೇತ್ರಾವತಿ ಸೇತುವೆಯಲ್ಲಿ ಕಾರಿನಲ್ಲಿ ಬಂದ ಸುಶಿಕ್ಷಿತರಂತೆ ಕಾಣುವ ಮಹಿಳೆಯರಿಬ್ಬರು ಕಸ ಎಸೆಯುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಕಸವನ್ನು ಎಸೆದ ಬೆಂಗಳೂರು ಮೂಲದ ವಾಹನವನ್ನು ಪತ್ತೆ ಹಚ್ಚಿ ಕಾರಿನಲ್ಲಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಇಂದು ನೇತ್ರಾವತಿ ನದಿಯಲ್ಲಿ ಕಸ ಎಸೆಯುವುದು ನಿಷೇಧವಿದ್ದರೂ, ಬೆಂಗಳೂರು ನೋಂದಾಯಿತ ವಾಹನದಲ್ಲಿದ್ದ ಇಬ್ಬರು ಮಹಿಳೆಯರು ಕಸವನ್ನು ನದಿಗೆ ಎಸೆಯುವ ದೃಶ್ಯವನ್ನು ಹಿಂದಿನ ಕಾರಿನಲ್ಲಿದ್ದವರು ಮೊಬೈಲ್‌ನಲ್ಲೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು.

ಈ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿದ್ದರು. ಇದೀಗ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ಕಂಕನಾಡಿ ನಗರ ಪೋಲಿಸ್ ಠಾಣೆಯಲ್ಲಿ ವಾಹನವನ್ನು ವಶಕ್ಕೆ ಪಡೆದು ,ಕಾರಿನಲ್ಲಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

- Advertisement -

Latest News

error: Content is protected !!