Sunday, June 7, 2026
Homeಕರಾವಳಿಚಿಕ್ಕಮಗಳೂರಿನಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದ ಕಾರು, ಓರ್ವ ನೀರುಪಾಲು

ಚಿಕ್ಕಮಗಳೂರಿನಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದ ಕಾರು, ಓರ್ವ ನೀರುಪಾಲು

- Advertisement -
- Advertisement -

ಚಿಕ್ಕಮಗಳೂರು: ಹಳ್ಳದಲ್ಲಿ ಕಾರು ಕೊಚ್ಚಿ ಹೋಗಿ ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಸಂಬಂಧಿಕರ ಮನೆಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದ್ದು, ಚಿಕ್ಕಮಗಳೂರಿನ ಎನ್ ಆರ್ ಪುರದಲ್ಲಿ ಕಾರಿನ ಸಮೇತ ಮೂವರು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.ತಕ್ಷಣ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ಕಾರಿನಲ್ಲಿದ್ದ 51 ವರ್ಷದ ಪ್ರಸನ್ನ ಎಂಬುವವರು ನೀರು ಪಾಲಾಗಿದ್ದಾರೆ.

ಭಾರಿ ಮಳೆ ಹಾಗೂ ಹಳ್ಳದಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಪ್ರಸನ್ನ ಅವರ ಶೋಧಕ್ಕೂ ಅಡ್ಡಿಯುಂಟಾಗಿದೆ.

- Advertisement -

Latest News

error: Content is protected !!