Thursday, June 4, 2026
Homeಕರಾವಳಿಹ್ಯಾಂಡ್ ಬ್ರೇಕ್ ಜಾಮ್ ಆಗಿ ಕಾರಿಗೆ ಢಿಕ್ಕಿ ಹೊಡೆದ ರಿಕ್ಷಾ: ಆಟೋ ಚಾಲಕ ಸ್ಥಳದಲ್ಲೇ ಸಾವು

ಹ್ಯಾಂಡ್ ಬ್ರೇಕ್ ಜಾಮ್ ಆಗಿ ಕಾರಿಗೆ ಢಿಕ್ಕಿ ಹೊಡೆದ ರಿಕ್ಷಾ: ಆಟೋ ಚಾಲಕ ಸ್ಥಳದಲ್ಲೇ ಸಾವು

- Advertisement -
- Advertisement -

ಉಪ್ಪಿನಂಗಡಿ: ಹ್ಯಾಂಡ್ ಬ್ರೇಕ್ ಜಾಮ್ ಆದ ಕಾರಣ ಆಟೋವೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೊಡಾಜೆ ಪಂತಡ್ಕ ನಿವಾಸಿ ಹಮೀದ್(35) ಮೃತ ಚಾಲಕ. ರಿಕ್ಷಾದಲ್ಲಿದ್ದ ಹಮೀದ್ ರವರ ಪತ್ನಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಣಿಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾದ ಹ್ಯಾಂಡ್ ಬ್ರೇಕ್ ಇದ್ದಕ್ಕಿದ್ದಂತೆ ಜಾಮ್ ಆಗಿದೆ. ಈ ವೇಳೆ ವಿರುದ್ಧ ದಿಕ್ಕಿನಿಂದ ಆಗಮಿಸುತ್ತಿದ್ದ ಫೋರ್ಡ್ ಇಕೋಸ್ಪೋರ್ಟ್ಸ್ ಕಾರಿಗೆ ಅಪ್ಪಳಿಸಿದೆ. ಢಿಕ್ಕಿಯ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!