Thursday, June 4, 2026
Homeತಾಜಾ ಸುದ್ದಿಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಕಾರು- ಬಾಲಕನಿಗೆ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಕಾರು- ಬಾಲಕನಿಗೆ ಗಾಯ

- Advertisement -
- Advertisement -

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸುಮಾರು ಹತ್ತು ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಇಂದು ಬಂಟ್ವಾಳ ಬೈಪಾಸ್ ಬಳಿ ನಡೆದಿದೆ. ಘಟನೆಯಲ್ಲಿ ಐದು ವರ್ಷದ ಬಾಲಕ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಅಲ್ಲಿಪಾದೆಯಿಂದ ಬಿಸಿರೋಡ್ ಕಡೆಗೆ ಬರುತ್ತಿರುವ ವೇಳೆ ಬಂಟ್ವಾಳದ ಬೈಪಾಸ್ ಕೆಂಪುಗುಡ್ಡೆ ಕ್ರಾಸ್ ನ ಎದುರುಗಡೆ ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ತಂತಿ ಕಂಬಕ್ಕೆ ಡಿಕ್ಕಿ ಹೊಡೆದ ಕಾರು ಬಳಿಕ ಆಳೆತ್ತರದ ಗುಂಡಿಗೆ ಪಲ್ಟಿಯಾಗಿ ಬಿದ್ದಿದೆ.

ಸುವಿದ್ ಎಂಬ ಬಾಲಕನಿಗೆ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಇಬ್ಬರು ಮಕ್ಕಳು ಸಹಿತ ಒಟ್ಟು ನಾಲ್ಕು ಮಂದಿ ಪಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!