Saturday, June 6, 2026
Homeಅಪರಾಧಕಾಸರಗೋಡು: ಕಾರು ಹಾಗೂ ನಗದು ದರೋಡೆ ಪ್ರಕರಣ- ಆರೋಪಿ ಅರೆಸ್ಟ್

ಕಾಸರಗೋಡು: ಕಾರು ಹಾಗೂ ನಗದು ದರೋಡೆ ಪ್ರಕರಣ- ಆರೋಪಿ ಅರೆಸ್ಟ್

- Advertisement -
- Advertisement -

ಕಾಸರಗೋಡು: ಕಾರು ಚಾಲರೋರ್ವರಿಗೆ ಬೆದರಿಕೆಯೊಡ್ಡಿ ನಗದು ದರೋಡೆ ಮಾಡಿ ಕಾರು ಅಪಹರಿಸಿದ್ದ ಪ್ರಕರಣದ ಆರೋಪಿಯನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮೀಯಪದವು ಅಡ್ಕತ್ತಗುರಿಯ ರಹೀಮ್ ಎಂದು ಗುರುತಿಸಲಾಗಿದೆ.

ಆರೋಪಿಯು ಮಾರ್ಚ್ 3 ರಂದು ಪೈವಳಿಕೆ ನಿವಾಸಿಯನ್ನು ಬೆದರಿಸಿ ಕಾರು ಮತ್ತು 18 ಸಾವಿರ ರೂ. ನಗದನ್ನು ದರೋಡೆ ನಡೆಸಿ ಪರಾರಿಯಾಗಿದ್ದ. ಘಟನೆ ಸಂಬಂಧ ಸನಿಹದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿಗಾಗಿ ಶೋಧ ನಡೆಸಿದ್ದ ಪೊಲೀಸರು ಇದೀಗ ಪೈವಳಿಕೆ ಬಾಯಿಕಟ್ಟೆ ಎಂಬಲ್ಲಿಂದ ಆತನನ್ನು ಬಂಧಿಸಿದ್ದಾರೆ. ಈತ ಪೊಲೀಸರ ಕೊಲೆಗೆ ಯತ್ನ, ಮಾದಕ ವಸ್ತು ಸಾಗಾಟ ಹಾಗೂ ಇನ್ನಿತರ ಪ್ರಕರಣಗಳ ಆರೋಪಿಯಾಗಿದ್ದಾನೆ.

- Advertisement -

Latest News

error: Content is protected !!