Thursday, June 4, 2026
Homeಉತ್ತರ ಕನ್ನಡಪ್ರತಿಭಟನಾ ಮೆರವಣಿಗೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಯತ್ನ

ಪ್ರತಿಭಟನಾ ಮೆರವಣಿಗೆಯಲ್ಲಿ ವಿಷ ಕುಡಿದು ಆತ್ಮಹತ್ಯೆ ಯತ್ನ

- Advertisement -
- Advertisement -

ಭಟ್ಕಳ: ಪ್ರತಿಭಟನೆ ವೇಳೆ ಪ್ರತಿಭಟನಾಕಾರ ವಿಷ ಕುಡಿಯಲು ಯತ್ನಿಸಿದ ಘಟನೆ ಭಟ್ಕಳದ ಶಂಶುದ್ದೀನ್ ವೃತ್ತದ ಬಳಿ ನಡೆದಿದೆ. ಮೊಗೇರ ಸಮುದಾಯದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಈ ಘಟನೆ ನಡೆದಿದೆ.

ಗಾಂಧಿನಗರ ನಿವಾಸಿ ಉಮೇಶ ಮೊಗೇರ ಆತ್ಮಹತ್ಯೆಗೆ ಯತ್ನಿಸಿದ ಪ್ರತಿಭಟನಾಕಾರನಾಗಿದ್ದು, ಪ್ರವರ್ಗ 1ರ ಬದಲಿಗೆ ಮೊದಲಿನಂತೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಿಸುವಂತೆ ಬೇಡಿಕೆಯೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಅನಿರ್ಧಿಷ್ಟಾವಧಿ ಧರಣಿಯನ್ನು ಮೊಗೇರ ಸಮುದಾಯ ಹಮ್ಮಿಕೊಂಡಿದೆ.

ವೆಂಕಟಾಪುರದಿಂದ ಮಿನಿವಿಧಾನಸೌಧ ವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದ ವೇಳೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುವ ವೇಳೆ ವಿಷ ಕುಡಿಯಲು ಯತ್ನ ನಡೆದಿದೆ. ಶಂಶುದ್ದೀನ್ ಸರ್ಕಲ್ ಏರಿ ವಿಷ ಕುಡಿಯಲು ಪ್ರತಿಭಟನಾಕಾರ ಮುಂದಾದಾಗ ಸ್ಥಳದಲ್ಲಿದ್ದ ಯುವಕರಿಂದ ವಿಷ ಕುಡಿಯುತ್ತಿದ್ದ ಉಮೇಶ್ ರಕ್ಷಣೆ ನಡೆದಿದೆ.

- Advertisement -

Latest News

error: Content is protected !!