Thursday, June 4, 2026
Homeಕರಾವಳಿಉಡುಪಿಕುಂದಾಪುರ: ಅನಧಿಕೃತ ಮರಳು ದಂಧೆ- ಆರು ಬೋಟ್ ಜಪ್ತಿ

ಕುಂದಾಪುರ: ಅನಧಿಕೃತ ಮರಳು ದಂಧೆ- ಆರು ಬೋಟ್ ಜಪ್ತಿ

- Advertisement -
- Advertisement -

ಕುಂದಾಪುರ: ತ್ರಾಸಿ ಗ್ರಾಮದ ಸೌಪರ್ಣಿಕಾ ನದಿಯಿಂದ ಅನಧಿಕೃತವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಭೂಗರ್ಭಶಾಸ್ತ್ರಜ್ಞೆ ಸಂಧ್ಯಾ, ಮರಳುಗಾರಿಕೆಗೆ ಬಳಸುತ್ತಿದ್ದ ನಾಲ್ಕು ದೋಣಿಗಳನ್ನು ವಶಕ್ಕೆ ತೆಗೆದುಕೊಂಡರು. ಹಾಗೇ ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿಯ ಮೇವಾಡಿ ಸೇತುವೆ ಬಳಿ ಅನಧಿಕೃತವಾಗಿ ಮರಳು ದಂಧೆಗೆ ಬಳಸುತ್ತಿದ್ದ ಎರಡು ದೋಣಿಗಳನ್ನು ಜಪ್ತಿ ಮಾಡಿದ್ದಾರೆ.

ನಾಡ ಬಡಾಕೆರೆ ವ್ಯಾಪ್ತಿಯ ಕೆಲವೆಡೆ ದಾಳಿ ನಡೆಸಲಾಗಿದೆ. ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರು ಬೋಟ್‌ ಹಾಗೂ ಇತರೆ ಪರಿಕರಗಳನ್ನು ನೀರಿನ ಅಡಿಯಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾರೆ.

- Advertisement -

Latest News

error: Content is protected !!