Friday, June 5, 2026
Homeತಾಜಾ ಸುದ್ದಿಬಿಎಸ್ ವೈ ಒಬ್ಬ ಉತ್ತಮ ಆಡಳಿತಗಾರ :ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ!

ಬಿಎಸ್ ವೈ ಒಬ್ಬ ಉತ್ತಮ ಆಡಳಿತಗಾರ :ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ!

- Advertisement -
- Advertisement -

ಪಣಜಿ: ಕರ್ನಾಟಕದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದು, ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಗೋವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಪಿ.ನಡ್ಡಾ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದು,ಕರ್ನಾಟಕ ಉತ್ತಮವಾಗಿ ನಡೆಯುತ್ತಿದೆ. ಉಳಿದಂತೆ, ಯಡಿಯೂರಪ್ಪನವರು ಕೂಡ ಎಲ್ಲ ವಿಷಯಗಳನ್ನೂ ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ” ಎಂದು ಯಡಿಯೂರಪ್ಪ ಅವರನ್ನ ಹೊಗಳಿ ಅಟ್ಟಕೇರಿಸಿದ್ದಾರೆ.

ಕರ್ನಾಟಕದಲ್ಲಿನ ನಾಯಕತ್ವ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಸಿದ ಅವರು, ‘ಹಾಗೆಂದು ನಿಮಗೆ ಅನಿಸುತ್ತಿದೆ. ಆದರೆ ನಮಗೆ ಹಾಗೆ ಅನಿಸುತ್ತಿಲ್ಲ’ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಈ ಅಚ್ಚರಿಯ ಹೇಳಿಕೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

- Advertisement -

Latest News

error: Content is protected !!