Saturday, June 6, 2026
Homeತಾಜಾ ಸುದ್ದಿಹುಡುಗ ಕಪ್ಪಗಿದ್ದಾನೆ ಮದುವೆ ಬೇಡವೆಂದ ಹುಡುಗಿ: ಕೋಪದಲ್ಲಿ ತಂಗಿಯನ್ನು ಕೊಚ್ಚಿ ಕೊಂದ ಅಣ್ಣ

ಹುಡುಗ ಕಪ್ಪಗಿದ್ದಾನೆ ಮದುವೆ ಬೇಡವೆಂದ ಹುಡುಗಿ: ಕೋಪದಲ್ಲಿ ತಂಗಿಯನ್ನು ಕೊಚ್ಚಿ ಕೊಂದ ಅಣ್ಣ

- Advertisement -
- Advertisement -

ರಾಯಚೂರು: ಹುಡುಗ ಕಪ್ಪು ಎಂದು ನಿಶ್ಚಯವಾಗಿದ್ದ ಯುವಕನೊಂದಿಗೆ ಮದುವೆಯಾಗಲು ನಿರಾಕರಿಸಿದ ತಂಗಿಯನ್ನು ಅಣ್ಣನೊಬ್ಬ ಕೊಚ್ಚಿ ಕೊಂದಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಯುವತಿಯನ್ನು ಚಂದ್ರಕಲಾ (22) ಎಂದು ಗುರುತಿಸಲಾಗಿದ್ದು, ಈಕೆಯ ಅಣ್ಣ ಶ್ಯಾಮಸುಂದರನೇ ಅವಳನ್ನು ಕೊಲೆ ಮಾಡಿದ್ದಾನೆ.

ಚಂದ್ರಕಲಾಗೆ ಇದೇ ಜುಲೈ 13ಕ್ಕೆ ವಿವಾಹ ನಿಶ್ಚಯವಾಗಿದ್ದು ಮನೆಯವರು ಲಗ್ನಪತ್ರಿಕೆಯನ್ನೆಲ್ಲಾ ಹಂಚಿದ್ದಾರೆ. ಆದರೆ ಹುಡುಗ ಕಪ್ಪು ಎಂಬ ಕಾರಣ ನೀಡಿ ಚಂದ್ರಕಲಾ ತಾನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಾಳೆ. ಮದುವೆ ನಿರಾಕರಣೆಯಿಂದ ಕುಪಿತಗೊಂಡ ಅಣ್ಣ ಶ್ಯಾಮಸುಂದರ ಮನೆಯಲ್ಲಿನ ಕೊಡಲಿಯಿಂದ ಕೊಚ್ಚಿ ತಂಗಿಯನ್ನು ಹತ್ಯೆ ಮಾಡಿದ್ದಾನೆ. ಪ್ರಸ್ತುತ ಆರೋಪಿಯನ್ನು ಗಬ್ಬೂರು ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!