Friday, May 17, 2024
Homeಕರಾವಳಿಬಂಟ್ವಾಳಕ್ಕೆ ಆಗಮಿಸಿದ ಐಸಿಯು ಬಸ್ : ಈ ಬಸ್ ನಲ್ಲಿ ಏನೇನು ಸೌಲಭ್ಯವಿದೆ ಗೊತ್ತಾ?

ಬಂಟ್ವಾಳಕ್ಕೆ ಆಗಮಿಸಿದ ಐಸಿಯು ಬಸ್ : ಈ ಬಸ್ ನಲ್ಲಿ ಏನೇನು ಸೌಲಭ್ಯವಿದೆ ಗೊತ್ತಾ?

spot_img
- Advertisement -
- Advertisement -

ಬಂಟ್ವಾಳ: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಕೈ ಜೋಡಿಸುವ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿಯು ಸಾರಿಗೆ ಸುರಕ್ಷಾ-ಐಸಿಯು ಬಸ್ಸನ್ನು ವಿನ್ಯಾಸಗೊಳಿಸಿದ್ದು, ಅದರಂತೆ  ಬಂಟ್ವಾಳದ ಜನತೆಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಒಂದು ಐಸಿಯು ಬಸ್ಸು ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಘಟಕವನ್ನು ತಲುಪಿದೆ.

ದ.ಕ, ಉಡುಪಿ, ಕೊಡುಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಹಾಗೂ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಐಸಿಯು ಬಸ್ಸು ಬಂಟ್ವಾಳಕ್ಕೆ ಆಗಮಿಸಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜೂ. 17 ರಂದು ಉಪಮುಖ್ಯಮಂತ್ರಿ ಯಾಗಿರುವ ಸಾರಿಗೆ ಸಚಿವ ಲಕ್ಷಣ್ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ಸು ನೀಡುವ ಕುರಿತು ಚರ್ಚಿಸಿದ್ದು, ಡಿಸಿಎಂ ಒಪ್ಪಿಗೆ ಸೂಚಿಸಿದ್ದರು.

ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಈಗಾಗಲೇ ಬಸ್ಸಿನ ವ್ಯವಸ್ಥೆಗಳ ಕುರಿತು ತಾಂತ್ರಿಕ ಸಿಬಂದಿ ಪರಿಶೀಲಿಸಿದ್ದು, ಎಲ್ಲಾ ಘಟಕಗಳು ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಲಾಗಿದೆ. ಆಂಬ್ಯುಲೆನ್ಸ್ ರೀತಿಯಲ್ಲೇ ಸೈರನ್ ವ್ಯವಸ್ಥೆಯನ್ನು ಬಸ್ಸು ಒಳಗೊಂಡಿದ್ದು, ಒಳಭಾಗಕ್ಕೆ ಹೊಕ್ಕರೆ ಮಿನಿ ಕ್ಲಿನಿಕ್‌ನ ರೀತಿಯ ವ್ಯವಸ್ಥೆ ಇರುತ್ತದೆ. ಹಿಂದಿನ ಭಾಗದಲ್ಲಿ ರೋಗಿಗಳು ಪ್ರವೇಶಿಸುವ ವ್ಯವಸ್ಥೆ ಇರುತ್ತದೆ.

ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಐಸಿಯು ಬಸ್ಸು ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಐದು ಹಾಸಿಗೆಗಳು, ಪ್ರತಿ ಬೆಡ್‌ಗಳಿಗೂ ಆಕ್ಸಿಜನ್ ವ್ಯವಸ್ಥೆ, ರೋಗಿಗಳ ರಕ್ತದೊತ್ತಡ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಮೊದಲಾದವುಗಳನ್ನು ಮಾನಿಟರ್ ಮಾಡುವ ವ್ಯವಸ್ಥೆ ಇರುತ್ತದೆ. ಐವಿ ವ್ಯವಸ್ಥೆ, ವೆಂಟಿಲೇಟರ್ ಅಳವಡಿಸುವ ಸೌಲಭ್ಯ, ತುರ್ತು ಔಷಧ ವ್ಯವಸ್ಥೆ, ತುರ್ತು ಅಗತ್ಯಗಳಿಗೆ ಜನರೇಟರ್ ವ್ಯವಸ್ಥೆಯೂ ಇದೆ. ಜತೆಗೆ ನೋಟಿಸ್ ಬೋರ್ಡ್, ರೋಗಿಗಳ ಶೀಘ್ರ ಗುಣಮುಖರಾಗುವ ಕುರಿತು ಬರಹಗಳು ಕೂಡ ಇವೆ.

- Advertisement -
spot_img

Latest News

error: Content is protected !!