Friday, June 5, 2026
HomeUncategorized'ಕೋಪಾ' ಫುಟ್ಬಾಲ್ ಟೂರ್ನಿ: ಅರ್ಜೆಂಟಿನಾಗೆ ಚಾಂಪಿಯನ್ ಪಟ್ಟ!!

‘ಕೋಪಾ’ ಫುಟ್ಬಾಲ್ ಟೂರ್ನಿ: ಅರ್ಜೆಂಟಿನಾಗೆ ಚಾಂಪಿಯನ್ ಪಟ್ಟ!!

- Advertisement -
- Advertisement -

ರಿಯೋ ಡಿ ಜನೈರೋ: ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ಭರ್ಜರಿ ಗೆಲುವಿನೊಂದಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಬ್ರೆಜಿಲ್ ನ ರಿಯೋ ಡಿ ಜನೇರಿಯೋದಲ್ಲಿ ನಡೆದ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು 1-0ಯಿಂದ ಮಣಿಸಿ ಕೋಪಾ ಅಮೆರಿಕಾ ಟ್ರೋಫಿಯನ್ನು ಎತ್ತಿ ಹಿಡಿದಿದೆ.

ಅರ್ಜೆಂಟೀನಾ ಗೆಲುವಿನ ಗೋಲು 22 ನೇ ನಿಮಿಷದಲ್ಲಿ ರೊಡ್ರಿಗೋ ಡಿ ಪಾಲ್, ಏಂಜೆಲ್ ಡಿ ಮಾರಿಯಾ ಅವರಿಗೆ ಲಾಂಗ್ ಪಾಸ್ ನೀಡಿದ ನಂತರ ಬಂದಿದೆ. ಪಂದ್ಯಾವಳಿಯಲ್ಲಿ ಬ್ರೆಜಿಲ್ ಬಿಟ್ಟುಕೊಟ್ಟ ಮೂರನೇ ಗೋಲು ಇದಾಗಿತ್ತು. 1993ರ ನಂತರ ಅಜೆರ್ಂಟೀನಾ ಗೆದ್ದ ಪ್ರಮುಖ ಟ್ರೋಫಿ ಇದಾಗಿದೆ.

ಫುಟ್ ಬಾಲ್ ಪ್ರಪಂಚದ ಶ್ರೇಷ್ಠ ಆಟಗಾರ ಎಂದೇ ಕರೆಯಲ್ಪಡುವ ಲಿಯೋನಲ್ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಪ್ರತಿಷ್ಠಿತ ಪ್ರಶಸ್ತಿ ಗೆದ್ದಿಲ್ಲ ಎನ್ನುವ ಅಪವಾದವಿತ್ತು. ಆದರೆ ಈ ಟ್ರೋಫಿ ಗೆಲ್ಲುವ ಮೂಲಕ ಆ ಕೊರಗು ಹಾಗೂ ಅಪವಾದ ದೂರವಾಗಿದೆ.

- Advertisement -

Latest News

error: Content is protected !!