Thursday, June 4, 2026
Homeತಾಜಾ ಸುದ್ದಿತಂಗಿಯ ಮೃತದೇಹ ಸಾಗಿಸುವಾಗ ಅಪಘಾತವಾಗಿ ಅಣ್ಣನೂ ಸಾವು

ತಂಗಿಯ ಮೃತದೇಹ ಸಾಗಿಸುವಾಗ ಅಪಘಾತವಾಗಿ ಅಣ್ಣನೂ ಸಾವು

- Advertisement -
- Advertisement -

ಚಿತ್ರದುರ್ಗ: ತಂಗಿಯ ಮೃತದೇಹ ಸಾಗಿಸುವಾಗ ಅಪಘಾತವಾಗಿ ಅಣ್ಣನೂ ಸಾವನ್ನಪ್ಪಿರುವ  ಘಟನೆ ಚಿತ್ರದುರ್ಗದ ಹಿರಿಯೂರು ಬಳಿ ನಡೆದಿದೆ. ರಾಮು‌ ಮುದಿಗೌಡ ಮೃತರು.

 ಅವರ ತಂಗಿ ರೇಣುಕಾ ಕಳೆದ ಮೂರು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ತಂಗಿ ರೇಣುಕಾ ಶವವನ್ನ ಆಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು, ಅದರ ಹಿಂದೆ ಕಾರಿನಲ್ಲಿ ಮುದಿಗೌಡ ಹೋಗ್ತಾ ಇದ್ರು. ಈ ವೇಳೆ ಅಪಘಾತವಾಗಿದ್ದು, ಮುದಿಗೌಡನಿಗೂ ತೀವ್ರಗಾಯವಾಗಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರಾಮು ಮುದಿಗೌಡ ಹಿರೇಕೆರೂರು ತಾಲೂಕ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾಗಿದ್ದರು. ಅವರು ಪ್ರಸ್ತುತ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಹಿರೇಕೆರೂರ ತಾಲೂಕು ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

- Advertisement -

Latest News

error: Content is protected !!