Thursday, June 4, 2026
Homeತಾಜಾ ಸುದ್ದಿಲಾಕ್ ಡೌನ್ ನಿಂದ ಖಿನ್ನತೆಗೊಳಗಾಗಿ ಕಾರ್ಕಳದಲ್ಲಿ ವ್ಯಕ್ತಿ ಆತ್ಮಹತ್ಯೆ

ಲಾಕ್ ಡೌನ್ ನಿಂದ ಖಿನ್ನತೆಗೊಳಗಾಗಿ ಕಾರ್ಕಳದಲ್ಲಿ ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಲಾಕ್‌ಡೌನ್‌ನಿಂದ ಖಿನ್ನತೆ ಒಳಗಾಗಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಾರ್ಕಳದ ಮಾಳ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ  ಸುರೇಶ್ ಶೆಟ್ಟಿ (43) ಎಂಬವರು ಲಾಕ್ ಡೌನ್ ಹಿನ್ನೆಲೆ ಮನೆಗೆ ಬಂದಿದ್ದರು. ವ್ಯಾಪಾರವಿಲ್ಲದೇ ಹೇಗೆ ಬದುಕೋದು ಎಂದು ಚಿಂತಿಸಿ ಮಾನಸಿಕ ಖಿನ್ನತೆಗೆ ಒಳಗಾಗಿ, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!