Sunday, June 7, 2026
Homeತಾಜಾ ಸುದ್ದಿಗಂಡನ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹಣ, ಚಿನ್ನಾಭರಣ ದೋಚಿ ನವವಧು ಪರಾರಿ

ಗಂಡನ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹಣ, ಚಿನ್ನಾಭರಣ ದೋಚಿ ನವವಧು ಪರಾರಿ

- Advertisement -
- Advertisement -

ಬೆಂಗಳೂರು:ಪತಿ ಮನೆಯಿಂದ ಚಿನ್ನಾಭರಣ,ಹಣ ತೆಗೆದುಕೊಂಡು ಸೊಸೆ ಪರಾರಿಯಾಗಿರುವ ಬಗ್ಗೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಗೌತಮಿ ಪರಾರಿಯಾದ ನವವಿವಾಹಿತೆ.ಸೊಸೆಯ ವರ್ತನೆಗೆ ರೋಸಿ ಹೋಗಿದ್ದ ನೊಂದ ಕುಟುಂಬ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದೆ.

ಮದುವೆಯಾದ ಬಳಿಕ ಮಗನ ಜೊತೆ ಸೊಸೆಯನ್ನ ಅಮೆರಿಕಾಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿತ್ತು. ಗೌತಮಿ ಮದುವೆಗೂ ಮುಂಚೆ ಅಮೇರಿಕಾಗೆ ಹೋಗುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಳು.ಆದರೆ ಮದುವೆಯಾದ ಬಳಿಕ ನಿರಾಕರಿಸಿದ್ದಾಳೆ.ಆಕೆಗೆ ವೀಸಾ,ಟಿಕೆಟ್ ಎಲ್ಲವೂ ಹಣ ಕೊಟ್ಟು ರೆಡಿ ಮಾಡಿದ್ದರು.ಆದರೆ ಗೌತಮಿ ತನ್ನ ಗಂಡನ ಜೊತೆ ಅಮೆರಿಕಾಗೆ ಹೋಗದೆ ಪತಿಯ ಮನೆಯಲ್ಲಿದ್ದ ಹಣ, ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾಳೆ.

- Advertisement -

Latest News

error: Content is protected !!