Sunday, June 7, 2026
Homeತಾಜಾ ಸುದ್ದಿರಾಜಕೀಯಕ್ಕೆ ಬನ್ನಿ…ಆ ನಿರ್ಧಾರದ ಬಗ್ಗೆ ಯೋಚಿಸಿ: ಜ್ಯೂ. ಎನ್‌ಟಿಆರ್‌ಗೆ ಆಫರ್ ನೀಡಿ ಬಂದ ಅಮಿತ್...

ರಾಜಕೀಯಕ್ಕೆ ಬನ್ನಿ…ಆ ನಿರ್ಧಾರದ ಬಗ್ಗೆ ಯೋಚಿಸಿ: ಜ್ಯೂ. ಎನ್‌ಟಿಆರ್‌ಗೆ ಆಫರ್ ನೀಡಿ ಬಂದ ಅಮಿತ್ ಶಾ

- Advertisement -
- Advertisement -

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಈ ಕಾರಣಕ್ಕೆ ಜ್ಯೂ.ಎನ್ಟಿಆರ್ ಅವರನ್ನು ಅಮಿತ್ ಶಾ ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.

ಇದಕ್ಕೆ ಪೂರಕವೆಂಬಂತೆ ಭಾನುವಾರ (ಆಗಸ್ಟ್ 21) ಜ್ಯೂ.ಎನ್ಟಿಆರ್ ಮನೆಗೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಇವರಿಬ್ಬರ ಭೇಟಿ ರಾಜಕೀಯ ಉದ್ದೇಶವನ್ನೇ ಹೊಂದಿದೆ ಎಂಬುದನ್ನು ಮೂಲಗಳು ತಿಳಿಸಿವೆ. ಅಮಿತ್ ಶಾ ಸ್ಟಾರ್ ನಟನನ್ನು ಭೇಟಿ ಮಾಡುತ್ತಾರೆ ಎಂದರೆ ಅದರ ಹಿಂದೆ ರಾಜಕೀಯ ಕಾರಣ ಇದೆ ಎಂದೇ ಹೇಳಲಾಗುತ್ತಿದೆ. ‘ರಾಜಕೀಯಕ್ಕೆ ಬನ್ನಿ. ಆ ನಿರ್ಧಾರದ ಬಗ್ಗೆ ಯೋಚಿಸಿ’ ಎಂಬುದನ್ನು ಅಮಿತ್ ಶಾ ಅವರು ಜ್ಯೂ.ಎನ್ಟಿಆರ್ಗೆ ಹೇಳಿದ್ದಾರೆ ಎಂದು ವರದಿ ಆಗಿದೆ

- Advertisement -

Latest News

error: Content is protected !!