Sunday, April 28, 2024
Homeತಾಜಾ ಸುದ್ದಿಹೀಗೊಂದು ವಿಚಿತ್ರ ಘಟನೆ: ಹುಡುಗ ಫೋಟೋದಲ್ಲಿ ನೋಡಿದ ಹಾಗಿಲ್ಲ ಅಂತಾ ಮದುವೆ ಮಂಟಪದಿಂದ ಎದ್ದು...

ಹೀಗೊಂದು ವಿಚಿತ್ರ ಘಟನೆ: ಹುಡುಗ ಫೋಟೋದಲ್ಲಿ ನೋಡಿದ ಹಾಗಿಲ್ಲ ಅಂತಾ ಮದುವೆ ಮಂಟಪದಿಂದ ಎದ್ದು ಹೋದ ವಧು

spot_img
- Advertisement -
- Advertisement -

ಪಾಟ್ನಾ: ಬೇರೆ ಬೇರೆ ವಿಚಾರಕ್ಕೆ ಮದುವೆ ನಿಂತು ಹೋಗೋದನ್ನು ನಾವೆಲ್ಲ ನೋಡಿದ್ದೇವೆ ಕೇಳಿದ್ದೇವೆ. ಆದ್ರೆ  ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನೌತಾನ್ ಬ್ಲಾಕ್ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ಇಲ್ಲಿನ  ದೇವಾಲಯದಲ್ಲಿ ಮದುವೆಯೊಂದು ನಿಗದಿಯಾಗಿತ್ತು. ಅದರಂತೆ ಎಲ್ಲಾ ಶಾಸ್ತ್ರಗಳು ನಡೆಯುತ್ತಿದ್ದವು.  ವಧು ಸುಂದರವಿ ರೆಡಿಯಾಗಿ ಮಂಟಪಕ್ಕೆ ಬಂದಿದ್ದಾಳೆ. ಆದ್ರೆ ನಗು ನಗುತ್ತಾ ಮಂಟಪಕ್ಕೆ ಬಂದ ಆಕೆ ಕೆಲವೇ ಕ್ಷಣಗಳಲ್ಲಿ ಸಿಟ್ಟು ಮತ್ತು ಅಳುವಿನೊಂದಿಗೆ ಮಂಟಪದಿಂದ ಹೊರ ನಡೆದಿದ್ದಾಳೆ.

ಅದಕ್ಕೆ ಕಾರಣ ಕೇಳಿದ್ರೆ ನೀವೆಲ್ಲಾ ಅಚ್ಚರಿ ಪಡೋದು ಗ್ಯಾರಂಟಿ. ಹೌದು.. ವಾಟ್ಸ್​ಆಯಪ್​ನಲ್ಲಿ ವರನ ಫೋಟೋ ನೋಡಿದಾಗ ಆತ ಅವಳಿಗೆ ಸುಂದರವಾಗಿ ಕಂಡಿದ್ದನಂತೆ. ಆದರೆ ಮಂಟಪದಲ್ಲಿ ಕಂಡ ಆತನ ಮುಖ ಆಕೆಗೆ ಇಷ್ಟವಾಗಿಲ್ಲ. ಹುಡುಗ ನಾನು ವಾಟ್ಸ್​ಆಯಪ್​ನಲ್ಲಿ ನೋಡಿದ ಹುಡುಗನ ಹಾಗಿಲ್ಲ ಎಂದು ಅಳೋದಕ್ಕೆ ಆರಂಭಿಸಿದ್ದಾಳೆ.

 ಸೊಸೆಯಾಗಿ ಬರಬೇಕಾದವಳ ದೂರು ಕೇಳಿ ವರನ ಕುಟುಂಬದವರೂ ಸಿಟ್ಟಿಗೆದ್ದು ಜಗಳ ಆರಂಭಿಸಿದ್ದಾರೆ. ವಧುವಿನ ಕುಟುಂಬದವರು ಆಕೆಯ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗದೆ ಎರಡೂ ಕುಟುಂಬಗಳ ನಡುವಿನ ಜಗಳ ತಾರಕಕ್ಕೇರಿದೆ. ಅಷ್ಟರಲ್ಲಿ ಊರಿನ ಮುಖ್ಯಸ್ಥರು ಮಧ್ಯಸ್ತಿಕೆ ವಹಿಸಿದ್ದು, ಮದುವೆ ಮಾಡದೆಯೇ ವರನ ಕುಟುಂಬವನ್ನು ವಾಪಾಸು ಕಳುಹಿಸಿದ್ದಾರೆ

- Advertisement -
spot_img

Latest News

error: Content is protected !!