ಲೈಂಗಿಕ ಕ್ರಿಯೆ ದೃಶ್ಯಗಳನ್ನು ಪ್ರಿಯಕರ ಶೇರ್ ಮಾಡಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಅಹಮದಾಬಾದ್ ಸಮೀಪದ ಚಾಹಾರ ನಗರ್ ರ ಯುವಕ, ಯುವತಿ ನಡುವೆ ಪರಿಚಯವಾಗಿದ್ದು ಇಬ್ಬರು ಪ್ರೀತಿಸಿದ್ದಾರೆ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಪ್ರಿಯಕರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂಟಿಯಾಗಿದ್ದ ಯುವತಿ ಮನೆಗೆ ಹೋಗಿದ್ದಾನೆ.
ಪ್ರೇಯಸಿ ಮನೆಗೆ ಬಂದ ಪ್ರಿಯಕರ ಪುಸಲಾಯಿಸಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದು ಯುವತಿ ಮೈಮರೆತಿದ್ದ ವೇಳೆ ಆಕೆಗೆ ಗೊತ್ತಿಲ್ಲದಂತೆ ಚಿತ್ರೀಕರಣ ಮಾಡಿಕೊಂಡಿದ್ದಾನೆ. ನಂತರ ತನ್ನ ಸ್ನೇಹಿತರಿಗೆ ಪ್ರಿಯತಮೆಯೊಂದಿಗಿನ ಸೆಕ್ಸ್ ವಿಡಿಯೋ ಶೇರ್ ಮಾಡಿದ್ದಾನೆ.
ಈ ವೀಡಿಯೋ ತೋರಿಸಿ ಸ್ನೇಹಿತರು ಕೂಡ ಯುವತಿಗೆ ಸೆಕ್ಸ್ ಗಾಗಿ ಬಲವಂತ ಮಾಡಿದ್ದಾರೆ. ಪ್ರಿಯಕರನೇ ಇಂತಹ ಕೃತ್ಯ ಎಸಗಿರುವುದು ಗೊತ್ತಾದ ಯುವತಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯ ಪ್ರಿಯಕರ ಮತ್ತು ಮೂವರು ಸ್ನೇಹಿತರನ್ನು ಬಂಧಿಸಿದ್ದಾರೆ.