Friday, June 5, 2026
Homeಕರಾವಳಿಮಂಗಳೂರಿನಲ್ಲಿ ಬಾಲಕನ ಅಪಹರಣ ಯತ್ನ : ಜೊತೆಗಿದ್ದ ಬಾಲಕನ ಧೈರ್ಯದಿಂದ ತಪ್ಪಿದ ಅಪಾಯ

ಮಂಗಳೂರಿನಲ್ಲಿ ಬಾಲಕನ ಅಪಹರಣ ಯತ್ನ : ಜೊತೆಗಿದ್ದ ಬಾಲಕನ ಧೈರ್ಯದಿಂದ ತಪ್ಪಿದ ಅಪಾಯ

- Advertisement -
- Advertisement -

ಮಂಗಳೂರು: ಗೋಣಿ ಚೀಲದಿಂದ ಮುಸುಕು ಹಾಕಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಘಟನೆ ಮಂಗಳೂರಿನ  ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದ ಸಮೀಪದ ನಡೆದಿದೆ. ಬುಧವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದ್ವಿಚಕ್ರ ವಾಹನದಲ್ಲಿ ಬಂದ ಮಕ್ಕಳ ಕಳ್ಳರು ಎನ್ನಲಾದ ಮೂವರು ಆಗಂತುಕರು ಬುಧವಾರ ಸಂಜೆ 7 ಗಂಟೆ ಹೊತ್ತಿಗೆ ಮನೆಗೆ ಹೋಗುತ್ತಿದ್ದ ಬಾಲಕನ ಬಳಿ ಬೈಕ್ ನಿಲ್ಲಿಸಿ ಗೋಣಿ ಮುಸುಕು ಹಾಕಿ ಬಾಲಕನನ್ನು ಹಿಡಿಯಲು ಯತ್ನಿಸಿದ್ದಾರೆ. ಅದನ್ನು ಗಮನಿಸಿದ ಜೊತೆಗಿದ್ದ ಇನ್ನೋರ್ವ ಬಾಲಕ ಧೈರ್ಯದಿಂದ ಅವರ ಮೇಲೆ ಕಲ್ಲು, ಮಣ್ಣಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಜೊತೆಗೆ ಹಿಂದಿನಿಂದ ಬಾಲಕರ ಮನೆಯವರು ಬರುತ್ತಿರುವುದನ್ನು ನೋಡಿ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ. ಈ ಬಗ್ಗೆ  ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ಕೊಂಚಾಡಿ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು, ಬಾಲಕನ ತಲೆಗೆ ಗೋಣಿಯಿಂದ ಮುಸುಕು ಹಾಕುವ ದೃಶ್ಯ ಸೆರೆಯಾಗಿದೆ.

- Advertisement -

Latest News

error: Content is protected !!