Wednesday, June 3, 2026
Homeಕರಾವಳಿವಿಟ್ಲದಲ್ಲಿ ಮದ್ಯದ ನಶೆಯಲ್ಲಿದ್ದ ಜೆಸಿಬಿ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ

ವಿಟ್ಲದಲ್ಲಿ ಮದ್ಯದ ನಶೆಯಲ್ಲಿದ್ದ ಜೆಸಿಬಿ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ

- Advertisement -
- Advertisement -

ಮಂಗಳೂರು: ಮದ್ಯದ ನಶೆಯಲ್ಲಿದ್ದ ಜೆಸಿಬಿ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಸಾವನ್ನಪ್ಪಿರುವ ಘಟನೆ ವಿಟ್ಲ ಸಮೀಪ ನಡೆದಿದೆ.

ಬಂಟ್ವಾಳ ತಾಲೂಕಿನ ವಿಟ್ಲದ ಕಣಿಯೂರು ಬಳಿ ಅಪಘಾತ ಸಂಭವಿಸಿದ್ದು, ಜೆಸಿಬಿ ವಾಹನ ಸೈಕಲ್ ಚಲಾಯಿಸುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದು ಸಾವು ಸಂಭವಿಸಿದೆ.

ಕಣಿಯೂರು ನಿವಾಸಿ ಹಸೈನಾರ್ ಎಂಬವರ ಪುತ್ರ ಮಹಮ್ಮದ್ ಅಖಿಲ್(8) ಸಾವನ್ನಪ್ಪಿದ್ದಾನೆ.

ಮದ್ಯದ ನಶೆಯಲ್ಲಿದ್ದ ಗದಗ ಮೂಲದ ಜೆಸಿಬಿ‌ ಚಾಲಕ ಅಪಘಾತದಿಂದ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕೆಯಿಂದ ಪಕ್ಕಕ್ಕೆ ಸರಿಸಿ ಚಾಲಕ ಸ್ಥಳದಿಂದ ತೆರಳಿದ್ದ ಎನ್ನಲಾಗಿದೆ.

ಸ್ಥಳೀಯರು ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದು, ವಿಟ್ಲ ಪೊಲೀಸರು ಚಾಲಕ ಸಾಧಿಕ್ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!